ತಾಳಿ ಕಟ್ಟಿದವಳನ್ನೇ 50 ಪೀಸ್ ಮಾಡಿದ ಗಂಡ! ಹೆಂಡ್ತಿ ಕಾಣಿಸ್ತಿಲ್ಲ ಅಂತ ಕಣ್ಣೀರಿಟ್ಟ!

ತನ್ನ ಲಿವ್ ಇನ್ ರಿಲೇಶನ್​ ಶಿಪ್​ನಲ್ಲಿದ್ದ (Live In Relationship) ಶ್ರದ್ಧಾ ವಾಕರ್​ (Shraddha Walker) ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಮಾಡಿದ್ದ ಅಫ್ತಾಬ್ (Aftab) ಅಮೀನ್ ಪೂನಾವಾಲಾ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

ಇದೀಗ ಅದೇ ರೀತಿಯ ಘಟನೆಯೊಂದು ಜಾರ್ಖಂಡ್​ನಲ್ಲಿ ನಡೆದಿದೆ. ಪತಿಯೇ (Husband) ತನ್ನ ಪತ್ನಿಯ (Wife) ಕೊಂದು, ಆಕೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿರುವ ಘಟನೆ ಜಾರ್ಖಂಡ್‌ನ (Jharkhand) ಸಾಹೇಬ್‌ಗಂಜ್‌ನಲ್ಲಿ ನಡೆದಿದೆ. ಇದುವರೆಗೂ ಪೊಲೀಸರು ಮೃತದೇಹದ 18 ತುಂಡುಗಳನ್ನು ವಶಪಡಿಸಿಕೊಂಡಿದ್ದು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

ಪತ್ನಿ ಕೊಂದು ನಾಪತ್ತೆ ದೂರು ದಾಖಲಿಸಲು ಠಾಣೆಗೆ ಹೋದ

ಕಳೆದ ಎರಡು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಆರೋಪಿ ಮತ್ತು ಮೃತ ಮಹಿಳೆ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಪತ್ನಿಯನ್ನು ಕೊಂದ ಬಳಿಕ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆರೋಪಿಯೇ ಪತ್ನಿ ನಾಪತ್ತೆಯಾಗಿರುವುದಾಗಿ ದೂರು ನೀಡಲು ಪೊಲೀಸ್​ ಠಾಣೆಗೆ ಆಗಮಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!