ದೇವಸ್ಥಾನಕ್ಕೆ ಕಳ್ಳತನಕ್ಕೆಂದು ಬಂದು ಸಿಕ್ಕಿಬಿದ್ದ ಕಳ್ಳ; ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟ ಗ್ರಾಮಸ್ಥರು

ದೇವಸ್ಥಾನಕ್ಕೆ ಕನ್ನ ಹಾಕಲು ಯತ್ನಿಸಿದ ಖದೀಮನನ್ನ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟಿರೋ ಘಟನೆ ಕನಕಪುರ ತಾಲೂಕಿನ ತೋಟಹಳ್ಳಿ ಗ್ರಾಮದಲ್ಲಿ ನಡೆದಿದೆ. ತೋಟಹಳ್ಳಿ ಗ್ರಾಮದ ಪ್ರದೀಪ್ (30) ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿ.

ತೋಟಹಳ್ಳಿ ಗ್ರಾಮದ ಮಾದೇಶ್ವರ ಮತ್ತು ಕರಡಿ ಮಾರಮ್ಮ ದೇವಸ್ಥಾನದಲ್ಲಿ ಖತರ್ನಾಕ್​ ಕಳ್ಳ ಕಳುವು ಮಾಡಲು ಬಂದಿದ್ದ.

ಜತೆಗೆ ಗ್ರಾಮದ ಅನೇಕ ಮನೆಗಳಲ್ಲೂ ಚಿಲ್ಲರೆ ಕಳ್ಳತನ ಮಾಡುತ್ತಿದ್ದ. ಎಂದಿನಂತೆಯೇ ನಿನ್ನೆ ರಾತ್ರಿಯು ಮತ್ತೆ ಅದೇ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಪ್ರದೀಪ್ ಕಳ್ಳತನ ಮಾಡಲು ಬಂದಿದ್ದಾನೆ. ಈ ವೇಳೆ ಗ್ರಾಮಸ್ಥರಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ ಪ್ರದೀಪ್​ನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ಕೊಟ್ಟಿದ್ದಾರೆ. ನಂತರ ಸಾತನೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧ ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!