Siddheshwar Swamiji Health Update | ನಿಜವಾಗಿಯೂ ಆಗಿದ್ದೇನು..? ಯಾವುದು ಸತ್ಯ ಯಾವುದು ಮಿತ್ಯ..?

ಜ್ಞಾನಯೋಗ ಮಠದ ಮುಂದೆ ಜನವೋ ಜನ, ಎಲ್ಲರ ಮುಖದಲ್ಲೂ ಭಯದ ವಾತಾರವಣ.. ಸಿದ್ದೇಶ್ವರ ಶ್ರೀಗಳ ನೆನೆದು ಕಣ್ಣೀರಲ್ಲಿ ಭಕ್ತಗಣ. ಮಂದಿರದ ಮುಂದೆ ಶಾಮೀಯಾನ, ಚೇರ್ಗಳ ವ್ಯವಸ್ಥೆ.

ಇಂದು ಸಂಜೆ ಬಂದ ಹೆಲ್ಥ್ ಬುಲೆಟಿನ್ ನಲ್ಲಿ ಶ್ರೀಗಳ ಆರೋಗ್ಯ ಸ್ಪಂದಿಸುತ್ತಿಲ್ಲ, ಬಿಪಿ ವೆರಿಯೇಶನ್ ಆಗ್ತಾ ಇದೆ ಎಂದು ಹೇಳಿದಕ್ಕೆ ಮಠದ ಕಡೆಗೆ ಭಕ್ತರು ದೌಡಾಯಿಸುತ್ತಿದ್ದಾರೆ, ಕಳೆದ ಮೂರು ದಿನಗಳಿಂದ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಇತ್ತು, ಆಹಾರವನ್ನು ಸೇವಿಸದೆ ದ್ರವ ಸ್ವರೂಪದ ಆಹಾರ ಸೇವನೆ ಮಾಡ್ತಾ ಇದ್ರು,

ಇವತ್ತು ಬಂದ ಮೂರು ಬುಲೆಟಿನ್ ನಲ್ಲಿ ವೈದ್ಯರು ಶ್ರೀಗಳ ಆರೋಗ್ಯದಲ್ಲಿ ಸ್ಥಿರತೆ ಇಲ್ಲ ಎಂದು ಹೇಳ್ತಿದ್ರು, ಸಧ್ಯದ ಮಠದ ಆವರಣ ಹಾಗೂ ವಾತಾವರಣ ನೋಡಿದರೆ ವೇದಿಕೆ ನಿರ್ಮಾಣ ಮಾಡ್ತಿದಾರೆ ಯಾವ ಕಾರಣಕ್ಕೆ ಎಂಬ ಸ್ಪಷ್ಟಣೆ ಸಹ ಇಲ್ಲ ಹಾಗೂ ಅಧಿಕೃತವಾಗಿ ಏನನ್ನೂ ಸಹ ಹೇಳಿಲ್ಲ‌.

error: Content is protected !!