ಹಣದ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನ; ಮೂವರು ಕ್ರೈಸ್ತ ಧರ್ಮದ ಪ್ರಚಾರಕರು ಅರೆಸ್ಟ್‌

ತುಮಕೂರು: ಜಿಲ್ಲೆಯ ಮರಳೂರು ದಿಣ್ಣೆಯಲ್ಲಿ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನಿಸಿದ ಆರೋಪ ಹಿನ್ನೆಲೆಯಲ್ಲಿ ಮೂವರು ಕ್ರೈಸ್ತ ಧರ್ಮದ ಪ್ರಚಾರಕರನ್ನು ಬಂಧಿಸಲಾಗಿದೆ.

ರವಿ ಎನ್ನುವರ ಕುಟುಂಬ ಹಾಗೂ ಸ್ನೇಹಿತರಿಗೆ ಹಣದ ಆಮಿಷ ಒಡ್ಡಿದ ಆರೋಪದಲ್ಲಿ ಜಯನಗರ ಪೊಲೀಸರು ಜೆಸ್ಸಿ, ಸಾರಾ ಮತ್ತು ಚೇತನ್‌ ಬಂಧಿಸಿದ್ದಾರೆ.ಆರೋಪಿಗಳು ಕ್ರೈಸ್ತ ಧರ್ಮಕ್ಕೆ ಸೇರುವಂತೆ ಧಾರ್ಮಿಕ ಬೋಧನೆಗಳ ಮೂಲಕ ಮಾತ್ರವಲ್ಲ, ಹಣದ ಆಮಿಷ ಒಡ್ಡಿಯೂ ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

error: Content is protected !!