ಪ್ರೇಮಿಯೊಬ್ಬಳು ದೇವರಿಗೆ ಬರೆದ ಹರಕೆ ಚೀಟಿ ವೈರಲ್​! ಅದರಲ್ಲಿ ಅಂಥದ್ದೇನಿದೆ?

ದೇವರ ಮೇಲೆ ನಂಬಿಕೆ ಇರುವವರು ದೇವಸ್ಥಾನಕ್ಕೆ ತೆರಳಿ ತನ್ನ ಸಂಕಷ್ಟವನ್ನು ದೇವರಲ್ಲಿ ಹೇಳಿಕೊಳ್ಳುತ್ತಾರೆ. ಅದರಂತೆಯೇ ತನ್ನ ಸಂಕಷ್ಟ ಕಳೆದು ಹೋದರೆ ಹರಕೆಯನ್ನು ತೀರಿಸುತ್ತಾರೆ. ಆದರೆ ಇಲ್ಲೊಂದು ಸ್ಟೋರಿ ವಿಭಿನ್ನವಾಗಿದೆ. ಇದು ಪ್ರೇಮಿಯೊಬ್ಬಳ ಕಥೆ. ಪ್ರೇಮಿಯೊಬ್ಬಳು ದೇವರಿಗೆ ಹರಕೆಯ ಚೀಟಿ ಬರೆದಿದ್ದಾಳೆ.

ಅದರಲ್ಲಿ ನನ್ನ ಪ್ರಿಯಕರ ಬಿಟ್ಟು ಬೇರೆ ಯಾರು ಕೂಡ ನನಗೆ ತಾಳಿ ಕಟ್ಟಬಾರದು ಎಂದು ಬರೆದಿದ್ದಾಳೆ.

ಹೌದು. ಅಚ್ಚರಿಯಾದರೂ ನಿಜ. ಈ ಘಟನೆ ನಡೆದದ್ದು, ಚಾಮರಾಜನಗರದ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದಲ್ಲಿ. ಪ್ರೇಮಿಯೊಬ್ಬಳು ದೇವರ ಬಳಿ ಹರಕೆ ಚೀಟಿ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾಳೆ. ಕಾಣಿಕೆ ಹುಂಡಿ ಎಣಿಸುವ ವೇಳೆ ಈ ಪತ್ರ ಸಿಕ್ಕಿದೆ.

ಪತ್ರದಲ್ಲಿ ಏನಿತ್ತು ಗೊತ್ತಾ?

ದೇವರೇ ನನ್ನ ‘ಮೂರ್ತಿ’ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು ಎಂದು ಚೀಟಿಯಲ್ಲಿ ಬರೆದು ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾಳೆ.

ಇತ್ತೀಚೆಗೆ ದೇವರೇ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ಅದೇ ಊರಿನ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಮತ್ತೊಂದು ರೀತಿಯ ಪತ್ರ ಸಿಕ್ಕಿದೆ.

error: Content is protected !!