spot_img
spot_img
spot_img
spot_img
spot_img
spot_img

13 ಠಾಣೆಯಲ್ಲಿ 31 ಕೇಸ್ ದಾಖಲು; ಆದ್ರೂ ಇವನ ಮೇಲಿಲ್ಲ ರೌಡಿಶೀಟರ್ ಪಟ್ಟಿ

Published on

ಕೃಷ್ಣ ಅಲಿಯಾಸ್ ಹಾವಳಿ ಕೃಷ್ಣ ಗ್ಯಾಂಗ್​ನ (Havali Krishna Gang) ಸಹಚರ ಅಜಯ್ ಅಲಿಯಾಸ್ ಮೆಂಟಲ್​ ಕಾಲಿಗೆ ಗುಂಡೇಟು (Police Firing) ನೀಡಿ ಆತನನ್ನು ಬಂಧಿಸಲಾಗಿತ್ತು. ಸದ್ಯ ಆರೋಪಿ ಅಜಯ್​ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

WhatsApp Group Join Now
Telegram Group Join Now

ಅಜಯ್ ಅಲಿಯಾಸ್ ಮೆಂಟಲ್ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ (Bannerughatta, Anekal) ನಿವಾಸಿ. ಕುಖ್ಯಾತ ಬೈಕ್ ಕಳ್ಳನಾಗಿದ್ದ (Thieve) ಈತ ಪೊಲೀಸರಿಗೆ (Police) ಚಳ್ಳೆ ಹಣ್ಣು ತಿನ್ನಿಸಿ ಕೃತ್ಯ ನಡೆಸಿ ಪರಾರಿಯಾಗುತ್ತಿದ್ದನು. ಆದ್ರೆ ಭಾನುವಾರ ಅಜಯ್ ಗ್ರಹಚಾರ ಕೆಟ್ಟಿತ್ತು. ಆಟೋ ಚಾಲಕನನ್ನು ಕಿಡ್ನಾಪ್ ಮಾಡಿ (kidnap Case) ಒಂದು ಲಕ್ಷ ಹಣ ಪಡೆದಿದ್ದ ಪ್ರಕರಣದಲ್ಲಿ ಜಿಗಣಿ ಪೊಲೀಸರು (Jigani Police) ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಬಂಧನದ ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಅಜಯ್ ಮಾಡಿರುವ ಅಪರಾಧಗಳ ಸಂಖ್ಯೆ ಕಂಡು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಬೆಂಗಳೂರು ಗ್ರಾಮಾಂತರ, ರಾಮನಗರ ತುಮಕೂರು ಸೇರಿದಂತೆ ಹದಿಮೂರು ಠಾಣೆಗಳಲ್ಲಿ ಅಜಯ್ ವಿರುದ್ಧ ಬರೋಬ್ಬರಿ 31 ಪ್ರಕರಣಗಳು ದಾಖಲಾಗಿದ್ದು, ಮೊಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದಾನೆ. ಇಷ್ಟಾದರೂ ಇವನ ಹೆಸರಿನಲ್ಲಿ ಯಾವುದೇ ಠಾಣೆಯಲ್ಲಿ ಈತ ರೌಡಿ ಶೀಟರ್ ಪಟ್ಟಿ ತೆರೆದಿಲ್ಲ ಎಂಬುದು ಅಚ್ಚರಿಯಾಗಿದೆ.

ಅಜಯ್ ವಿರುದ್ಧ 31 ಪ್ರಕರಣಗಳು ದಾಖಲು

WhatsApp Group Join Now
Telegram Group Join Now

ಇನ್ನೂ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ತುಮಕೂರು ವ್ಯಾಪ್ತಿಯಲ್ಲಿ ಕಿಡ್ನಾಪ್, ಡಕಾಯಿತಿ , ರಾಬರಿ ಮತ್ತು ಬೈಕ್ ಕಳವು ಸೇರಿದಂತೆ 31 ಪ್ರಕರಣಗಳು ಆರೋಪಿ ಅಜಯ್ ಮೇಲೆ ದಾಖಲಾಗಿವೆ.

ಗಾಂಜಾ ಮತ್ತಿನಲ್ಲಿ ಅಪರಾಧ ಕೃತ್ಯ

ಇಲ್ಲಿಯವರೆಗೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ, ಇವನು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ಚಾಳಿಯಾಗಿಸಿಕೊಂಡಿದ್ದಾನೆ. ಜೊತೆಗೆ ಆರೋಪಿಗಳು ಗಾಂಜಾ ಮತ್ತಿನಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗುತ್ತಿತ್ತು. ಮುಂದಿನ ದಿನಗಳಲ್ಲಿ ಗಾಂಜಾ ಪೆಡ್ಲರ್​​ಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ .

ಒಬ್ಬ ಆರೋಪಿ ಬೆರಳೆಣಿಕೆಯಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ರೌಡಿ ಪಟ್ಟಿ ತೆರೆದು ಜೈಲಿಗಟ್ಟಲಾಗುತ್ತದೆ. ಆದ್ರೆ ಆರೋಪಿ ಅಜಯ್ 31 ವಿವಿಧ ತೀವ್ರ ಸ್ವರೂಪದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಇಲ್ಲಿಯವರೆಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಪೊಲೀಸ್ ವ್ಯವಸ್ಥೆ ಬಗ್ಗೆ ಅನುಮಾನ ಮೂಡುತ್ತಿದೆ .

WhatsApp Group Join Now
Telegram Group Join Now
spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಸಿಸಿಬಿ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್!

ಮಂಗಳೂರು:- ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ...

ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಗೆಲುವು ನಿಶ್ಚಿತ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ಬೆಳಗಾವಿ: ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ...

ಪಬ್ಲಿಕ್ ನಲ್ಲೇ ರೂಂ ಗೆ ಬೇಗ ಬಾ ಎಂದು ಪತ್ನಿಗೆ ಆರ್ಡರ್ ಮಾಡಿದ ಕ್ರಿಕೆಟರ್ ಜಡೇಜಾ!

ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರವೀಂದ್ರ ಜಡೇಜಾ...

ಸಮಯ ಬಂದಾಗ ನಾನು ಸುಮಲತಾ ಜೊತೆ ಮಾತಾಡ್ತೀನಿ: HD ಕುಮಾರಸ್ವಾಮಿ!

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ...
error: Content is protected !!