ಗಾಂಜಾ ನಶೆಯಲ್ಲಿದ್ದ ಪುಂಡರು ಬಟ್ಟೆ ಅಂಗಡಿಗೆ ನುಗ್ಗಿ ದರೋಡೆ..!

ಬೆಂಗಳೂರು: ಗಾಂಜಾ ನಶೆಯಲ್ಲಿದ್ದ ಪುಂಡರು ಬಟ್ಟೆ ಅಂಗಡಿಗೆ ನುಗ್ಗಿ ದರೋಡೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಆಟೋದಲ್ಲಿ ಬಂದಿದ್ದ ಏಳೆಂಟು‌ ಜನರಿಂದ ಈ ಕೃತ್ಯ ನಡೆದಿದ್ದು, ಬಟ್ಟೆ ಅಂಗಡಿ ಮಾಲೀಕನಿಗೆ ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಿದ್ದಾರೆ.

ಬಸವನಪುರ ಸಾಯಿಬಾಬಾ ಟೆಂಪಲ್ ಬಳಿ ಈ ಘಟನೆ ಜರುಗಿದ್ದು,

ಗಾಂಜಾ ನಶೆಯಲ್ಲಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಅಂಗಡಿ ಮಾಲೀಕ ಹಾಗೂ ಸ್ಥಳೀಯರಿಗೆ ಮಾರಾಕಾಸ್ತ್ರಗಳಿಂದ ಯುವಕರು ಬೆದರಿಸಿದ್ದಾರೆ. ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

error: Content is protected !!