ಗೋವಾ ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಬಸ್ ಚಾಲಕ ಅಂದರ್

ರಜೆ ಇದ್ದ ಕಾರಣಕ್ಕೆ ಗೋವಾಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಬಸ್ ಚಾಲಕನನ್ನು ಬಂಧಿಸಲಾಗಿದೆ.

ಗೋವಾದಲ್ಲಿ ವಿಹಾರಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 35 ವರ್ಷದ ಬಸ್ ಚಾಲಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಶಂಕಿತ ಆರೋಪಿಯನ್ನು ದಕ್ಷಿಣ ಗೋವಾದ ಮೊರ್ಮುಗಾವೊದ ಜುವಾರಿನಗರ ಪ್ರದೇಶದ ನಿವಾಸಿ ಚಂದ್ರಶೇಖರ್ ವಾಸು ಲಮಾಣಿ ಎಂದು ಪೊಲೀಸರು ಗುರುತಿಸಲಾಗಿದೆ.

ಅತ್ಯಾಚಾರ ಸಂತ್ರಸ್ತೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಬಸ್ ಚಾಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಭಾನುವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಬೈನಿಂದ ಇತ್ತೀಚೆಗೆ ಗೋವಾಕ್ಕೆ ಬಂದ 14 ಜನರ ಗುಂಪಿನ ಭಾಗವಾಗಿದ್ದ ವಿದ್ಯಾರ್ಥಿನಿ ಹಾಗೂ ತಂಡದವರು ಮಿನಿಬಸ್ ಬಾಡಿಗೆಗೆ ಪಡೆದಿದ್ದರು. ಚಾಲಕನನ್ನು ಸೋಮವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!