ಸತತವಾಗಿ 20 ದಿನ ಎಳನೀರು ಸೇವನೆ ಮಾಡಿ ಪರಿಣಾಮ ನೀವೇ ನೋಡಿ

ಎಳನೀರು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಇದನ್ನು ಕುಡಿದರೆ ಮತ್ತಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ.

ಅದಷ್ಟೇ ಅಲ್ಲ ಎಳೆನೀರು ದೇಹದಲ್ಲಿ ಮ್ಯೂಕಸ್ ಉತ್ಪತ್ತಿಯನ್ನು ಹೆಚ್ಚಿಸಿ ಅಸಿಡ್ ಅಂಶದಿಂದಾಗುವ ಪರಿಣಾಮವನ್ನು ತಡೆಯುತ್ತದೆ.

ಜೊತೆಗೆ ಎಳೆನೀರು ಕುಡಿಯುವುದರಿಂದ ದೇಹದಲ್ಲಿ ಪಿ.ಹೆಚ್. ಮಟ್ಟ ಹೆಚ್ಚುತ್ತವೆ.

* ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಎಳೆ ನೀರು ಸೇವಿಸಿ ಒಂದು ಗಂಟೆ ಬಳಿಕ ಉಪಹಾರ ಸೇವಿಸುವ ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ಹಾಗೂ ದೇಹದ ಹೆಚ್ಚುವರಿ ತೂಕವನ್ನು ಶೀಘ್ರವಾಗಿ ಕಳೆದುಕೊಳ್ಳಲು ನೆರವಾಗುತ್ತದೆ.

* ಎಳೆನೀರನ್ನು ಸತತವಾಗಿ 20 ದಿನಗಳ ಕಾಲ ಕುಡಿಯುವ ಮೂಲಕ ಮೂಳೆಗಳಲ್ಲಿ ಗಾಳಿ, ಗುಳ‍್ಳೆಗಳು, ಮೂಳೆಗಳು ಟೊಳ್ಳಾಗುವುದನ್ನು ತಪ್ಪಿಸಬಹುದು.

* ನಮ್ಮ ದೇಹದ ಎಲ್ಲಾ ಅಂಗಗಳ ಮೂಲಕ ಸಾಗಬಲ್ಲ ಕ್ಷಮತೆ ಇರುವ ಎಳೆನೀರು ದೇಹದ ಎಲ್ಲಾ ಅಂಗಗಳನ್ನು ಈ ಮೂಲಕ ಸ್ವಚ್ಛಗೊಳಿಸಿ ಹಳೆಯ ಕಲ್ಮಶಗಳನ್ನು ನಿವಾರಿಸುತ್ತದೆ. ನಿತ್ಯವು ಕೊಂಚ ಕೊಂಚವಾಗಿ ಮೂತ್ರದ ಮೂಲಕ ಈ ಕಲ್ಮಶಗಳು ಹೊರ ಹೋಗುತ್ತದೆ.

* 20 ದಿನ ಸತತವಾಗಿ ಎಳೆ ನೀರು ಕುಡಿಯುವ ಮೂಲಕ ಅಧಿಕ ರಕ್ತದೊತ್ತಡ ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ. ರಕ್ತ ಸಂಚಾರವನ್ನು ಸುಲಲಿತಗೊಳಿಸಲು ಎಳೆ ನೀರು ನೆರವಾಗುತ್ತದೆ.

* ಸತತವಾಗಿ 20 ದಿನಗಳ ಕಾಲ ಎಳೆನೀರನ್ನು ಕುಡಿಯುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದು. ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

* ಸತತವಾಗಿ 20 ದಿನ ಎಳೆನೀರನ್ನು ಸೇವಿಸುವುದರಿಂದ ಹೊಟ್ಟೆ ಮತ್ತು ಕರಳುಗಳಲ್ಲಿ ಅಜೀರ್ಣತೆಯ ಕಾರಣ ಎದುರಾಗುವ ಆಮ್ಲೀಯತೆ ಮತ್ತು ಹೊಟ್ಟೆ ಉರಿಯನ್ನು ಕಡಿಮೆಗೊಳಿಸುತ್ತದೆ.

error: Content is protected !!