ಇಬ್ಬರು ಹೆಣ್ಣುಮಕ್ಕಳಿಗೆ ಡಯಾಬಿಟಿಸ್; ಮಕ್ಕಳನ್ನು ನದಿಗೆ ತಳ್ಳಿ ತಾವೂ ಆತ್ಮಹತ್ಯೆ ಮಾಡಿಕೊಂಡ ದಂಪತಿ

ಪಾಲಾರ್ ನದಿಗೆ ಹಾರಿ ದಂಪತಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಸೇಲಂನ ದಡಗಪಟ್ಟಿ ಮೂಲದ ಎಂ ಯುವರಾಜ್ (41), ಅವರ ಪತ್ನಿ ವಾನ್ವಿಜಿ (31) ಮತ್ತು ಅವರ ಪುತ್ರಿಯರಾದ ನಿತಿಕ್ಷಾ ಮತ್ತು ಅಪ್ಸರಾ ಎಂದು ಗುರುತಿಸಲಾಗಿದೆ.

7 ವರ್ಷದ ಹಿರಿಯ ಮಗಳು ನಿತಿಶಾಗೆ ಮಧುಮೇಹವಿತ್ತು. 5 ವರ್ಷದ ಎರಡನೇ ಮಗಳು ಅಕ್ಷರಾಗೂ ಮಧುಮೇಹ (Diabetes) ತಗುಲಿದ ಕಾರಣದಿಂದ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದೆ. ಇದು ಇಡೀ ಕುಟುಂಬವೇ ಆತ್ಮಹತ್ಯೆ (Suicide) ಮಾಡಿಕೊಳ್ಳುವಂತೆ ಮಾಡಿದೆ.

ಯುವರಾಜ್ ಮತ್ತು ವಾನ್ವಿಜಿ ಇಬ್ಬರೂ ಸೇಲಂನಲ್ಲಿರುವ ಖಾಸಗಿ ಟೈಲ್ಸ್ ಕಂಪನಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹಿರಿಯ ಮಗಳು ನಿತೀಶಾ ಕಳೆದ 3 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಿತೀಶಾಗೆ ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದು ಕೊಡಲಾಗುತ್ತಿತ್ತು. ಈ ಸ್ಥಿತಿಯಲ್ಲಿ ಎರಡು ದಿನಗಳ ಹಿಂದೆ 2ನೇ ಮಗಳು ಅಕ್ಷರಾ ಅಸ್ವಸ್ಥಳಾಗಿದ್ದಳು. ಇದರಿಂದ ಅಕ್ಷರಾಳ ತಂದೆ ಯುವರಾಜ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಜೀವನದಲ್ಲಿ ನಿರಾಶೆ ಅನುಭವಿಸಿದ ದಂಪತಿ
ಮೆಡಿಕಲ್ ರಿಪೋರ್ಟ್​ನಲ್ಲಿ ಎರಡನೇ ಮಗಳು ಅಕ್ಷರಾಗೂ ಡಯಾಬಿಟೀಸ್ ಇರುವುದು ಪತ್ತೆಯಾಗಿದೆ. 2 ಹೆಣ್ಣು ಮಕ್ಕಳಿಗೂ ಗುಣಪಡಿಸಲಾಗದ ಮಧುಮೇಹವಿದೆ ಎಂದು ಭಾವಿಸಿ ತಂದೆ ಯುವರಾಜ್​ ಜೀವನದಲ್ಲಿ ನಿರಾಶೆಗೊಂಡಿದ್ದಾರೆ.

ಬಳಿಕ ಮನೆಗೆ ತೆರಳಿ ಪತ್ನಿ ವಾನ್ವಿಜಿಗೆ 2ನೇ ಮಗಳ ವೈದ್ಯಕೀಯ ಪರೀಕ್ಷೆಯ ವರದಿ ತಿಳಿಸಿದ್ದಾರೆ. ಇದನ್ನು ಕೇಳಿ ಆಘಾತಕ್ಕೊಳಗಾದ ವಾನ್ವಿಜಿ ಎದೆಗುಂದಿದ್ದಾರೆ.

ಕುಟುಂಬ ಸಮೇತ ಆತ್ಮಹತ್ಯಾ ಪತ್ರ
ನಂತರ ಪತಿ-ಪತ್ನಿ ಇಬ್ಬರೂ ತಮ್ಮ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಯುವರಾಜ್ ಕುಟುಂಬ ಸಮೇತ ಆತ್ಮಹತ್ಯೆಯ ಪತ್ರ ಬರೆದಿಟ್ಟು ಪತ್ನಿ ವಾನ್ವಿಜಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಕಾವೇರಿ ನದಿ ಜಲಾಶಯ ಇರುವ ಕರ್ನಾಟಕ-ತಮಿಳುನಾಡು ಗಡಿಭಾಗದ ಮೆಟ್ಟೂರು ಬಳಿಯ ಕೊಳತ್ತೂರಿಗೆ ಮೋಟಾರ್ ಸೈಕಲ್ ನಲ್ಲಿ ತೆರಳಿದ್ದಾರೆ.

ಈ ದಂಪತಿ ತಮ್ಮ 2 ಹೆಣ್ಣು ಮಕ್ಕಳನ್ನು ಭಾರವಾದ ಹೃದಯದಿಂದ ಕಾವೇರಿ ನದಿಗೆ ಎಸೆದಿದ್ದಾರೆ. ಇದರಲ್ಲಿ 2 ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಂತರ ಯುವರಾಜ್ ಮತ್ತು ವಾನ್ವಿಜಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

error: Content is protected !!