ಹಿಂದೂ ಧರ್ಮಕ್ಕೆ ಹಿಂದೂ ವಿರೋದಿ ಕಾಂಗ್ರೆಸ್ಸಿಗರಿಂದ ಕಪ್ಪುಚುಕ್ಕೆ : ಬಿಜೆಪಿ ಯುವ ಮೋರ್ಚಾ

ಹಿಂದೂ ಧರ್ಮಕ್ಕೆ ಹಿಂದೂ ವಿರೋದಿ ಕಾಂಗ್ರೆಸ್ಸಿಗರಿಂದ ಕಪ್ಪುಚುಕ್ಕೆ : ಬಿಜೆಪಿ ಯುವ ಮೋರ್ಚಾ ದಾವಣಗೆರೆ.

ಬೆಳಗಾವಿ ಜಿಲ್ಲೆಯ ಶಾಸಕ ಹಾಗೂ ರಾಜ್ಯ ಕಾಂಗ್ರೇಸ್ ನ ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೊಳೆರವರು ನಮ್ಮ ಸನಾತನ ಹಿಂದೂ ದರ್ಮದ ಅವಹೇಳನ ಮಾಡಿದ್ದಾರೆ, ಪ್ರಪಂಚದ ಅತೀ ಹೆಚ್ಚು ಸನಾತನ ಹಾಗೂ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ದರ್ಮದ ಬಗ್ಗೆ ಹಾಗೂ ಹಿಂದೂ ಪದದ ಬಗ್ಗೆ ತುಂಬಾ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ, ಈ ಕಾಂಗ್ರೇಸ್ ನ ಪ್ರಮುಖ ಮುಖಂಡರು ಮುಸ್ಲೀಂರ ಓಲೈಕೆಗಾಗಿ ಹಿಂದೂಗಳನ್ನು ಅವಮಾನಿಸಿದ್ದಾರೆ, ಹಿಂದೂ ಎಂಬ ಪದ ತುಂಬಾ ಅಶ್ಲೀಲವಾಗಿದೆ ನನ್ನ ಬಾಯಿಂದ ಹೇಳಲು ಸಾದ್ಯವಿಲ್ಲ, ಈ ಪದ ಪರ್ಶೀಯನ್ ಬಾಷೆಯಿಂದ ಬಂದಿದೆ ಎಂದು ಹೇಳಿದ್ದಾರೆ, ಈ ಹೇಳಿಕೆ ಇವರ ಹೀನ ಮನಸ್ಥಿತಿಯನ್ನು ಬಿಂಬಿಸುತ್ತಿದೆ, ಚುನಾವಣಾ ವರ್ಷವಾಗಿದ್ದರಿಂದ ಮುಸ್ಲೀಂರ ಓಲೈಕೆ ಮಾಡಲು ಕಾಂಗ್ರೆಸ್ ನ ಪ್ರಮುಖರು ಈ ರೀತಿ ಹಿಂದೂ ವಿರೋದಿ ಹೇಳಿಕೆ ನೀಡಿದ್ದಾರೆ,
ಆದರೇ ಈ ತರಹದ ಹೇಳಿಕೆಗಳು ಇದೆ ಮೊದಲೇನಲ್ಲ ಅನೇಕ ಸಭೆ ಸಮಾರಂಭಗಳಲ್ಲಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತ ಬೇರೆ ಧರ್ಮದ ಮತಗಳಿಗಾಗಿ ಓಲೈಕೆ ಮಾಡುತ್ತಲೆ ಬಂದಿದ್ದಾರೆ, ಕಾಂಗ್ರೇಸ್ ನ ಅದ್ಯಕ್ಷರಾದ ಡಿ ಕೆ ಶಿವಕುಮಾರ್ ರಾಮನಗರದಲ್ಲಿ ಏಸುವಿನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ, ನನಗೆ ಕೇಸರಿ ತಿಲಕ ಕಂಡರೆ ನನಗೆ ಭಯ ಎಂದಿದ್ದರು ಕೇಸರಿ ಪೇಟವನ್ನು ಕಿತ್ತೇಸಿದ್ದರು ಹಾಗೂ ಈ ರಾಷ್ಟ್ರ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ ಎಂದಿದ್ದರು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ,
ನನ್ನನ್ನು ಹಿಂದೂ ಎಂದೂ ಕರೆಯಬೇಡಿ ಎಂದು ಮಾಜಿ ಪ್ರಧಾನ ಮಂತ್ರಿ ಜವಹಾರ್ ಲಾಲ್ ನೆಹರು ಹೇಳಿದ್ದರು ಆದೇ ಸಂಸ್ಕೃತಿಯನ್ನು ಈಗಿನ ಕಾಂಗ್ರೇಸ್ ಮುಖಂಡರು ಮುಂದುವರೆಸಿದ್ದಾರೆ, ಹಿಂದೂತ್ವ ಹಾಗೂ ಹಿಂದೂ ರಾಷ್ಟೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗಲೆಲ್ಲ ಹತ್ತಿಕ್ಕಲು ಕಾಂಗ್ರೇಸ್ ಪ್ರಯತ್ನಿಸುತ್ತಲೇ ಬಂದಿದೆ, ಇನ್ನೂಬ್ಬ ನಾಯಕ ಅದೇ ರೀತಿ ಹಿಂದೂ ಧರ್ಮವನ್ನು ಒಡೆಯಲು ಎಂ ಬಿ ಪಾಟೀಲ್ ಕೂಡ ಪ್ರಯತ್ನಿಸಿದ್ದರು, ಹೀಗೆ ಹಿಂದೂ ಎಂದರೆ ಕಾಂಗ್ರೇಸ್ ನವರಿಗೆ ಅಲರ್ಜಿಯಾಗಿ ಪರಿಣಮಿಸಿದ್ದು ಇದಕ್ಕೆಲ್ಲ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಯುವಮೋರ್ಚ ಮಾಧ್ಯಮ ಪ್ರಮುಖ್ ನರೇಂದ್ರ ಕೆ ಬಿ ತಿಳಿಸಿದ್ದಾರೆ

error: Content is protected !!