ಹಳೆಯ ದೇವಸ್ಥಾನಗಳನ್ನು ನಾನೇ ಧ್ವಂಸ ಮಾಡಿದ್ದೇನೆ: ವಿವಾದಿತ ಹೇಳಿಕೆ ನೀಡಿದ ಡಿಎಂಕೆ ಸಂಸದ

ಚೆನ್ನೈ: ಶ್ರೀಪೆರಂಬದೂರು ಲೋಕಸಭಾ ಕ್ಷೇತ್ರದಲ್ಲಿದ್ದ 100 ವರ್ಷಗಳಿಗೂ ಹಳೆಯದಾದ 3 ಹಿಂದು ದೇಗುಲಗಳನ್ನು ನಾನು ಒಡೆದು ಹಾಕಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಕೇಂದ್ರದ ಮಾಜಿ ಸಚಿವ, ಡಿಎಂಕೆ ಸಂಸದ ಟಿ.ಆರ್‌.ಬಾಲು ವಿವಾದಿತ ಹೇಳಿಕೆ ನೀಡಿದ್ದಾರೆ.ಸೇತು ಸಮುದ್ರ ಯೋಜನೆಗೆ ಬೆಂಬಲ ಸೂಚಿಸಿ ದ್ರಾವಿಡ ಸಭೆಗಳು ಮಧುರೈನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಲೋಕಸಭಾ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣವಾಗುವ ಹಾದಿಯಲ್ಲಿ ಇದ್ದ 100 ವರ್ಷಗಳಿಗೂ ಹಳೆಯ ದೇವಸ್ಥಾನಗಳನ್ನು ನಾನೇ ಧ್ವಂಸ ಮಾಡಿದ್ದೇನೆ.

 ಇವು ಲಕ್ಷ್ಮಿ, ಸರಸ್ವತಿ ಮತ್ತು ಪಾವರ್ತಿ ದೇವರಿಗೆ ಸೇರಿದ ದೇವಸ್ಥಾನಗಳಾಗಿದ್ದವು. ಈ ದೇಗುಲಗಳ ಧ್ವಂಸದ ವೇಳೆ ನನ್ನ ಸಹಚರರು ಮತ ಕಡಿತವಾಗುವ ಎಚ್ಚರಿಕೆ ನೀಡಿದ್ದರು. ಆದರೂ ನಾನು ತಲೆ ಕೆಡಿಸಿಕೊಳ್ಳದೇ ಇವುಗಳನ್ನು ತೆರವು ಮಾಡಿದೆ’ ಎಂದು ಹೇಳಿದ್ದಾರೆ.  ಸೇತು ಸಮುದ್ರ ಯೋಜನೆಗಾಗಿ ರಾಮ ಸೇತುವೆಯನ್ನು ತೆರವು ಮಾಡಬೇಕು ಎಂಬ ಹೇಳಿಕೆಗಳು ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಡಿಎಂಕೆ ಸಂಸದ ಈ ಹೇಳಿಕೆ ನೀಡಿದ್ದಾರೆ.

The post ಹಳೆಯ ದೇವಸ್ಥಾನಗಳನ್ನು ನಾನೇ ಧ್ವಂಸ ಮಾಡಿದ್ದೇನೆ: ವಿವಾದಿತ ಹೇಳಿಕೆ ನೀಡಿದ ಡಿಎಂಕೆ ಸಂಸದ appeared first on .

error: Content is protected !!