ಸತೀಶ ಜಾರಕಿಹೋಳಿ ಬೆನ್ನಿಗೆ ನಿಂತ ಡಿಎಸ್‌ಎಸ್

ವರದಿ:ಶಶಿಕಾಂತ ಪುಂಡಿಪಲ್ಲೆ,

ಅಥಣಿ- ಮನುವಾದಿಗಳು ಮುಚ್ಚಿಟ್ಟಿದ್ದ ಸತ್ಯವನ್ನು ಹೊರ ಹಾಕಿದ ಸತೀಶ ಜಾರಕಿಹೊಳಿಯವರ ಹೇಳಿಕೆ ಸತ್ಯವಾದುದು.ಇದನ್ನ ಆರಗಿಸಿಕೊಳ್ಳಲಾಗದ ಮನುವಾದಿಗಳು ಮಾಧ್ಯಮಗಳ ಮುಖಾಂತರ ಒಬ್ಬ ದಲಿತ ನಾಯಕನನ್ನು ರಾಜಕೀಯವಾಗಿ ಮುಗಿಸಲು ಹೊರಟಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸದಸ್ಯ ಸಿದ್ದಾರ್ಥ ಸಿಂಗೆ ಆರೋಪಿಸಿದರು.

ಅವರು ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿ ಮಾತನಾಡುತ್ತಿದ್ದರು. ಇತ್ತಿಚಿಗೆ ನಿಪ್ಪಾಣಿಯಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ಯಿಂದ ಮನೆ ಮನೆಗೆ ಬುದ್ಧ, ಬಸ ವ.ಅಂಬೇಡ್ಕರ್ ಎಂಬ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊ ಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿ ಸೇರಿರುವ ಜನ ಸಮೂಹ ವನ್ನು ಉದ್ದೇಶಿಸಿ ಮಾತನಾಡುವ ವೇಳೆ ಹಿಂದು ಶಬ್ದದ ಅರ್ಥದ ಹೇಳಿಕೆಯನ್ನು ತಿರುಚಿ ಸತೀಶ ಜಾರಕಿಹೊಳಿಯವರ ಮೇಲೆ

ಸತ್ಯಕ್ಕೆ ದೂರಾದ ಆರೋಪವನ್ನು ಮಾಡುತ್ತಿರುವುದು, ದುರಾದೃಷ್ಟಕರ ವಾಗಿದೆ. ಈ ಸಮಾವೇಶದಲ್ಲಿ ಸೇರಿದ

ಜನಸ್ತೋಮವನ್ನು ಕಂಡು ಮನುವಾದಿಗಳಿಗೆ ನಡುಕ ಶುರುವಾಗಿದೆ. ಇತಿಹಾಸದಲ್ಲಿ ಆಗಿರುವ ಅನೇಕ ಸತ್ಯಗಳನ್ನು ಮೂಲನಿವಾಸಿ ಭಾರತಿಯರಿಂದ ಮನುವಾದಿಗಳು ಮುಚ್ಚಿಟ್ಟಿದ್ದು ಆ ಸತ್ಯವನ್ನ ಸತೀಶ ಜಾರಕಿಹೊಳಿಯವರು ನೇರವಾಗಿ ಹೇಳುತ್ತಿದ್ದಾರೆ.

ಮನುವಾದಿಗಳು ಹಾಗೂ ಕೀಲ ಮಾಧ್ಯಮಗಳ ಷಡ್ಯಂತ್ರ: ಮಾಡಿ ಸತೀಶ ಜಾರಕಿಹೊಳಿ ಅವರ ಹೆಸರಿಗೆ ಮಸಿ ಬಳೆಯುವಂತಾ ಕಾರ್ಯವನ್ನು ಮಾಡುತ್ತಿದ್ದಾರೆ. ಸತೀಶ ಜಾರಕಿಹೊಳಿ ಅವರು ಮೂಲನಿವಾಸಿಗಳ ಪ್ರಶ್ನಾತೀತ ನಾಯಕರಿದ್ದು,

ಅವರನ್ನು ಮುಟ್ಟಿದರೆ, ನಾವು ಸುಮ್ಮನಿರುವದಿಲ್ಲ’ ಎಂದು ಎಚ್ಚರಿಕೆ ನೀಡಿ, ಜಾರಕಿಹೊಳಿ ಅವರಿಗೆ ದಲಿತ ಸಂಘಟನೆಗಳು ಸದಾ ಬೆಂಬಕ್ಕೆ ನಿಲ್ಲಲಿವೆ ಎಂದು ತಿಳಿಸಿದರು.

ಈ ವೇಳೆ ರಾಜ್ಯ ಸಂಘಟನಾ ಸಂಚಾಲಕರಾದ ಸಂಜಯ ಕಾಂಬ್ಳೆ, ಚಿದಾನಂದ ತಳಕೇರಿ,ಪ್ರಕಾಶ ಗೋಂಧಳಿ,ಪ್ರಕಾಶ ಕಾಂಬಳೆ,ಕುಮಾರ ಕಾಂಬ್ಳೆ ಅಜೀತ ಸರಿಕರ, ಪಿ.ಎಸ್‌.ಕಾಂಬಳೆ, ಅಡಿವೆಪ್ಪ ಕಾಂಬ್ಳೆ.ವಿಜಯಕುಮಾರ ಬಡಚಿ,ಪೀರಪ್ಪ ಕಾಂಪವನ್ ಕಾಂಬ್ಳೆ ಸೇರಿದಂತೆ ಅನೇಕರು ಇದ್ದರು.

error: Content is protected !!