ಶವ ಬಿಸಾಕಲು ಬಂದು ಪೋಲಿಸರ ವಶವಾದ ಖದೀಮರು..?

ಕ್ರೈಂ ಬ್ಯೂರೋ ವಿವೇಕವಾರ್ತೆ- ಹಾಸನದಲ್ಲಿ ಅಪರಿಚಿತನನ್ನು ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಮೇಲೆ ಬಿಸಾಡಲು ಬಂದು ಹಂತಕರು ಸಿಕ್ಕಿಬಿದ್ದಾರೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮದ ರೈಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿ ಶವವವನ್ನು ಹಳಿ ಮೇಲೆ ಬಿಸಾಕಲೆಂದು ಬಂದಂತಹ ಸಂದರ್ಭ ಶವದ ಸಮೇತ ಹಂತಕರ ಬುಲೆರೋ ವಾಹನ ಉರುಳಿ ಬಿದ್ದಿದೆ.

ಈ ವೇಳೆ ಸ್ಥಳೀಯರು ಅವರನ್ನು ಪೊಲಿಸರಿಗೆ ಒಪ್ಪಿಸಿದ್ದಾರೆ. ಶವದ ಜೊತೆ ಜೀಪ್‌ನೊಳಗೆ ಸಿಲುಕಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ರ ಡಾಬಾ ಒಂದರಲ್ಲಿ ಕೆಲಸಮಾಡೋ ನೌಕರರಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಕೊಲೆಯಾಗಿರುವ ವ್ಯಕ್ತಿ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

error: Content is protected !!