ರಾಯಬಾಗ:ಚಿಂಚಲಿ ಗ್ರಾಮದಲ್ಲಿ ಘರ್ಜಿಸಿದ ಹುಕ್ಕೇರಿ ಭಿಮ್ ಆರ್ಮಿ ಹುಲಿ ಕುಮಾರ ಕಡಹಟ್ಟಿ

ರಾಯಬಾಗ:ಚಿಂಚಲಿ ಗ್ರಾಮದಲ್ಲಿ ಘರ್ಜಿಸಿದ ಹುಕ್ಕೇರಿ ಭಿಮ್ ಆರ್ಮಿ ಹುಲಿ ಕುಮಾರ ಕಡಹಟ್ಟಿ.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಹಾಕಾಳಿ ಚಿಂಚಲಿ ಗ್ರಾಮದಲ್ಲಿ ಭಿಮ್ ಆರ್ಮಿ ಸಂಘಟನೆಯ ಹಾಗೂ ಕಛೇರಿ ಉದ್ಘಾಟನಾ ಸಮಾರಂಭದ ನಿಮಿತ್ಯ ಹುಕ್ಕೇರಿ ತಾಲೂಕಿನ ಕಡಹಟ್ಟಿ ಗ್ರಾಮದ ಕುಮಾರ ಕಡಹಟ್ಟಿ ಇವರ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನೇರವೇರಿಸಲಾಯಿತು.ಡಾ.ಅಂಬೇಡ್ಕರ್ ಇವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೂತನವಾಗಿ ಬೆಳಗಾವಿ ಜಿಲ್ಲೆಯ ಭಿಮ್ ಆರ್ಮಿ ಸಂಘಟನೆಯ ಸಂಘಟನೆಗೆ ಸೇರುವ ಕಾರ್ಯಕರ್ತರಿಗೆ ಶಾಲ್ ಧರಿಸುವ ಮೂಲಕ ಚಾಲನೆ ನೀಡಿದರು. ಬೆಳಗಾವಿ ಜಿಲ್ಲಾ ಕಾರ್ಯದರ್ಶಿಯಾದ ಕುಮಾರ ಇವರು ಹಲವು ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹೋರಾಟ ಮಾಡುವ ಮುಖಾಂತರ ಜನಮನ ಸೆಳೆದ ಯುವಕ ಕುಮಾರ್ ಅನೇಕ ವರ್ಷಗಳಿಂದ ಚಂದ್ರಶೇಖರ ಆಜಾದ ಇವರ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತ ಹೋರಾಟ ಮಾಡುತ್ತ ಜಿಲ್ಲೆಯಲ್ಲಿರುವ ದಲಿತರಿಗೆ ಬಡವರಿಗೆ ಅನ್ಯಾಯ ಭ್ರಷ್ಟಾಚಾರ ಹೀಗೆ ಅನೇಕ ಹೋರಾಟಗಳಲ್ಲಿ ಭಾಗಿಯಾಗಿ ಸರಕಾರದ ಸವಲತ್ತು ಪಡೆಯುವಲ್ಲಿ ಮೇಲುಗೈ. ದೇಶದಲ್ಲಿಯೆ ಘರ್ಜಿಸುತ್ತಿರುವ ಸಂಘಟನೆಯೆಂದರೆ ಅದು ಭೀಮ್ ಆರ್ಮಿ ಸಂಘಟನೆ ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಹಳ್ಳಿ ಹಳ್ಳಿಗಳಿಗೆ ಸಂಘಟನೆಯ ಬಲ ತುಂಬಿಸುವಲ್ಲಿ ಕುಮಾರ ಕಡಹಟ್ಟಿ ಇವರು ಹಗಲಿರುಳು ಶ್ರಮಿಸುತ್ತಿದ್ದಾರೆ.

error: Content is protected !!