ಬಸ್ ಸ್ಟಾಂಡನಲ್ಲಿ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ 17 ವರ್ಷ ಪ್ರಾಯದ ಹುಡುಗ..!?

ವಿವೇಕವಾರ್ತೆ ನ್ಯೂಸ್ – ಪಾಲಿಟೆಕ್ನಿಕ್ನಲ್ಲಿ ಓದುತ್ತಿದ್ದ 17 ವರ್ಷದ ಹುಡುಗನೊಬ್ಬ ಪಿಯುಸಿ ಓದುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಗೆ ಬಸ್ ನಿಲ್ದಾಣದಲ್ಲಿಯೇ ತಾಳಿ ಕಟ್ಟಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕಡಲೂರು ಪೊಲೀಸರು ಹುಡುಗನನ್ನು ಬಂಧಿಸಿದ್ದಾರೆ.

ವರದಿಗಳ ಪ್ರಕಾರ ಹುಡುಗ, ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಬಾಲಕಿಗೆ ನೋಡುಗರ ಸಮ್ಮುಖದಲ್ಲಿಯೇ ತಾಳಿ ಕಟ್ಟಿದ್ದಾನೆ. ಬಳಿಕ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಳಿಕ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತನಿಖೆ ಆರಂಭಿಸಿದೆ. ಕೊನೆಗೂ ಪೊಲೀಸರು ಮಂಗಳವಾರ ಅಪ್ರಾಪ್ತನನ್ನು ಬಂಧಿಸಿದ್ದಾರೆ.

error: Content is protected !!