ಘಟಪ್ರಭಾ: ಒಂದೊಂದು ಬಾರ್ ಗಳಿಗೆ ಒಂದೊಂದು ರೂಲ್ಸು, ಘಟಪ್ರಭಾಲ್ಲಿ ಒಬ್ಬ ಕಿಮ್ ಜಾಂಗ್ ಉನ್
ಘಟಪ್ರಭಾ- ಪಟ್ಟಣದಲ್ಲಿ ಉತ್ತರ ಕೊರಿಯಾದ ತರಹ ಏಕಚಕ್ರಾಧಿಪತ್ಯ ನಡೆಯುತ್ತಿರುವುದು ಹಲವಾರು ಬಾರಿ ಕಂಡುಬಂದರು ಸಹ ಪೋಲಿಸ್ ಇಲಾಖೆ ಮೌನ ತಾಳಿರುವುದು ಹಲವು ಅನುಮಾನಕ್ಕೆ ಕಾರಣವಾಗುತ್ತಿದೆ.
ನಿನ್ನೆ ಘಟಪ್ರಭಾ ಮೃತ್ಯುಂಜಯ ವೃತ್ತದಲ್ಲಿರುವ ಪೂರ್ಣಿಮಾ ಬಾರ್ ಗೆ ರಾತ್ರಿ ೧೧ ಗಂಟೆಗೆ ಪೋಲಿಸರು ಬಂದು ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬಾರ್ ಕ್ಲೊಸ್ ಮಾಡಿಸಿದರು, ಆದರೆ ಘಟಪ್ರಭಾದಲ್ಲಿ ಇರುವ ಮನಿಷ್ ಬಾರ್ ರಾತ್ರಿ ೧ ಗಂಟೆಯವರೆಗೂ ಸಹ ಓಪನ್ ಆಗಿತ್ತು, ಬಾರ್ ಮುಂದೆ ಜನ ಜಾತ್ರೆ ಇದ್ದರು ಸಹ ಪೋಲಿಸರ ವಾಹನ ಏನು ನೋಡದಂತೆ ಕುರುಡರಾಗಿ ಹೋಗಿದ್ದಾರೆ.
ಇಷ್ಟೇ ಅಲ್ಲದೇ ಗೌಪ್ಯವಾಗಿ ವಿಡಿಯೋ ಮಾಡುತ್ತಿರುವ ಪತ್ರಕರ್ತರ ಫೋನ್ ಕಸೆದುಕೊಂಡು, ನಮ್ಮ ಸಾಹುಕರ್ ಗೆ ಏನು ಮಾಡಲು ಸಾಧ್ಯವಿದೆ, ಏನು ಮಾಡಿಕೊಳ್ಳಲು ಸಹ ಆಗಲ್ಲ, ಎಲ್ಲರು ಎಂಜಲು ಕಾಸಿನ ಗುಲಾಮರು ಎಂದು ಅಹಂಕಾರದಿಂದ ಮಾತನಾಡಿದ್ದಾರೆ, ಇದು ನಮ್ಮ ಅಧಿಕಾರಿಗಳು ಯಾವ ರೀತಿಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಹಾಗೂ ಇನ್ನೊಂದು ವಿಡಿಯೋದಲ್ಲಿ ಘಟಪ್ರಭಾದ ಹಲವಾರು ಹೆಸರಾಂತ ಜನರ ಹೆಸರನ್ನು ಹೇಳಿ, ನೀನೊಬ್ಬನೇ ಪತ್ರಕರ್ತನಲ್ಲ, ನಮ್ಮ ಸಾಹುಕಾರ ಹಿಂದೆ ಒಬ್ಬ ಪತ್ರಕರ್ತ ಇದ್ದಾನೆ ಅವನೇ ಸಾಕು, ನಿನಗೆ ನಿನ್ನ ಫೋನ್ ಬೇಕಾದರೆ ಅವನ ಕಾಲಿಗೆ ಬಿದ್ದು
ಅಂತ ಕೇಳಿ ತೆಗೆದುಕೊ ಎಂಬ ಅಹಂಕಾರದ ಮಾತುಗಳನ್ನ ಆಡಿದ್ದಾರೆ.
ಆ ಪತ್ರಕರ್ತನ ಪತ್ರಿಕೆಗಳು ಇಂತಹ ಅನ್ಯಾಯ, ಸರಕಾರಿ ಆದೇಶಗಳನ್ನ ಪಾಲಿಸದೆ ಇರುವ ಜನರಿಗೆ ಶ್ರೀರಕ್ಷೆಯಾಗಿದೆ ಎಂದು ಅನ್ಸತಾ ಇದೆ. ಅದು ಅಲ್ಲದೇ ನೀನು ಊರಿನಲ್ಲಿ ಬದುಕಿ ತೋರಿಸು, ನಮ್ಮ ಹಿಂದೆ
, ಮಂತ್ರಿಗಳು ಇದ್ದಾರೆ ಎಂದು ನೇರವಾಗಿ ಹೇಳಿದ್ದಾರೆ.
ಘಟಪ್ರಭಾದ ಮೂಲನಿವಾಸಿಗಳಿಗೆ ಎಲ್ಲೊ ಆಚೆಯಿಂದ ಬಂದವರು ಧಂಕಿ ಹಾಕುತ್ತಿದ್ದಾರೆ ಅಂದ್ರೆ ಘಟಪ್ರಭಾದ ಆಡಳಿತ ವ್ಯವಸ್ಥೆ ಹೇಗಿದೆ ಊಹಿಸಿಕೊಳ್ಳಿ. ಘಟಪ್ರಭಾದಲ್ಲಿ ಕಿಮ್ ಜಾಂಗ್ ಉನ್ ಆಡಳಿತದಿಂದ ಬೆಸತ್ತಿರುವ ಜನರಿಗೆ ಯಾವಾಗ ನೆಮ್ಮದಿ ದೊರಕುತ್ತೋ ಆ ದೇವರೇ ಬಲ್ಲ…
ಇಷ್ಟು ಅಲ್ಲದೇ ಘಟಪ್ರಭಾ ಠಾಣೆಯ ಓರ್ವ ಸಿಬ್ಬಂದಿ ಮಧ್ಯಸ್ಥಿಕೆ ವಹಿಸಿ ಫೋನು ಮರಳಿ ಸಿಗುತ್ತೆ ಡೊಂಟ್ ವರಿ, ನಾನು ಮಾತನಾಡ್ತಿನಿ ಎಂದಾಗ ಪತ್ರಕರ್ತರು ಸುಮ್ಮನಾಗಿದ್ದರು. ಫೋನ್ ಕೇಳಲು ಇಂದು ಹೋದಾಗ ಬಾರ್ ಸಿಬ್ಬಂದಿ ಫೋನ್ ಕೊಡಲ್ಲ ಏನ್ ಮಾಡ್ಕೊತಿಯಾ ಮಾಡ್ಕೊ ಎಂದು ಹೇಳಿದ್ದಾರೆ ಹಾಗೂ ಪೋಲಿಸ್ ಹೋಗಿ ಕೇಳಿದಾಗಲೂ ಸಹ ಫೋನ್ ಕೊಡದೇ ಕಿಮ್ ಜಾಂಗ್ ಉನ್ ನ ಸೇನೆಯ ಪುಂಡರು ಪೋಲಿಸರ ಮಾತಿಗೂ ಸಹ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ…
ಅಧಿಕಾರಿಗಳು ತಮ್ಮ ಕೆಲಸವನ್ನು ಮರೆತು ಹೊಗಿದ್ದಾರೆ, ಕೆಲಸ ಮಾಡುವ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಮುಂದಾಗಿ ಮೊಬೈಲ್ ಕಸೆದುಕೊಂಡರೇ ಘಟಪ್ರಭಾ ಇರುವುದು ಭಾರತದಲ್ಲಾ ಅಥವಾ ಪಾಕಿಸ್ತಾನ, ಉತ್ತರ ಕೊರಿಯಾನಾ ಎನ್ನುವುದು ಗೊತ್ತಾಗುತ್ತಿಲ್ಲ….