ಘಟಪ್ರಭಾದಲ್ಲೊಬ್ಬ ನಕಲಿ ರೌಡಿ ಡಾಕ್ಟರ್..? ಇವನ ಪುಂಡಾಟಿಕೆ ಇಲ್ಲಿ ತಿಳದಿಕೊಳ್ಳಿ…?

 ಕ್ರೈಂ ಬ್ಯೂರೋ ವಿವೇಕವಾರ್ತೆ ಘಟಪ್ರಭಾ– ಪಟ್ಟಣದ ಮಟನ್ ಮಾರ್ಕೆಟ್ ನಲ್ಲಿ ಪಿರಜಾದೆಯ ಒಂದು ಕ್ಲಿನಿಕ್ ಇದೆ, ಹೊರಗಿನಿಂದ ನೋಡಿದ್ರೆ ಏನಪ್ಪ ಇದು ಹಂಚಿನ ಹೊದಿಕೆಯಿರುವ ಆಸ್ಪತ್ರೆ ಎಂದು ಅನ್ಸುತ್ತೇ ಆದ್ರೆ ಹೊರಗಿನಿಂದ ನೋಡದೆ ಒಳಗಡೆ ಹೊದ್ರೆ ಚಿತ್ರಣವೇ ಬೇರೆ, ರೋಗಿಗಳಿಗೆ ಸಲೈನ್ ಹಚ್ಚಿ ಮಲಗಿಸಲು ಬೆಡ್ ಗಳೇ ಇಲ್ಲದಿರುವ ಮುರುಖು ಮಂಚಗಳಿವೆ ಬೇಡ್ ಗಳ ಮೇಲೆ ಕುತ್ರೆ ಸಾಕು ಜುಂ ಅಂತ ಭರ್ಜರಿ ನಿದ್ದೆ ಬರುವುದು ಖಚಿತ ಇಂತಹ ಒಳ್ಳೆಯ ಆಸ್ಪತ್ರೆಯ ವೈದ್ಯ ಅಲ್ಲಲ್ಲಾ ಅವರೇ ಹೇಳಿದ ಹಾಗೇ ನಕಲಿ ವೈದ್ಯ ಹೆಬ್ಬಟ್ಟಂತೆ ಅವನು.

ಅವನನ್ನು ಪ್ರಶ್ನಿಸಲು ಹೋದ ಪತ್ರಕರ್ತರಿಗೆ ಈ ರೀತಿಯ ಉಡಾಫೆ ಉತ್ತರಗಳನ್ನ ನೀಡುತ್ತಾನೆ ಈ ಭೂಪ. ಇತನಿಗೆ ಸರ್ಕಾರದ ಪರವಾನಿಗೆ ಬೇಡ್ವಂತೆ ಏನೇ ಆದ್ರು ನೋಡ್ಕೊಳೆಕೆ ಹಿಂದೆ ಜನ ಇದಾರಂತೆ ಹಾಗೇ ಅವನ ಹಿಂದೆ ದೊಡ್ಡದಾದ ಅವನ ಸಮಾಜವೇ ಇದೆಯಂತೆ ನಾನು ಒಬ್ಬರ ಪರ್ಮಿಷನ್ ತೆಗೆದುಕೊಂಡಿದಿನಿ ನನ್ನನ್ನ ಇಲ್ಲಿ ಒಬ್ಬ ಬಲಿಷ್ಟ ವ್ಯಕ್ತಿ ತಂದು ಇರಸಿದ್ದಾರೆ ಅಷ್ಟು ಸಾಕು ನಂಗೆ, ನಾನು ಗೋಕಾಕ ನಗರದ ಪ್ರತಿಷ್ಠಿತ ಎಲುಬು ಕೀಲುಗಳ ಆಸ್ಪತ್ರೆಯಲ್ಲಿ 13 ವರ್ಷದ ಅನುಭವವಿದೆ, ಘಟಪ್ರಭಾಗೆ ಬಂದು ಆರು ವರ್ಷ ಆಗಿದೆ ನಂಗೆ ಯಾರ ಭಯವು ಇಲ್ಲಾ ಯಾವ ಟಿಎಚ್ಓ ಯಾವ ಡಿಎಚ್ಓ ಎಂದು ಮಾತನಾಡಿದ್ದು ನಮ್ಮ ರಹಸ್ಯ ಕ್ಯಾಮರಾದಲ್ಲಿ ಸೇರೆ ಆಗಿದೆ.

ಈ ಆಸಾಮಿಯ ಹೆಸರು ಕೇಳೊದು ತಪ್ಪು, ನಾನು ಹೆಬ್ಬಟ್ಟು ಎಂದು ವಿಡಿಯೋದಲ್ಲಿಯೇ ಹೇಳಿಕೆ ಕೊಟ್ಟಿದ್ದಾನೆ, ಇನ್ನೂ ಸರ್ಕಾರಿ ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡಿ ಆತನ ಸೋಕಾಲ್ಡ್ ಸಪೋಟರ್ಸ್ ಬಗ್ಗೆ ಹೇಳಿ ಪತ್ರಕರ್ತರನ್ನು ಹೆದರಿಸಲು ಯತ್ನಿಸಿದ್ದಾನೆ‌.ಈ ವಿಡಿಯೋವನ್ನ ನೋಡಿಯಾದರೂ ಇಂತಹ ನಕಲಿ ವೈದ್ಯರಿಗೆ ಕಡಿವಾಣ ಹಾಕುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೃಪೆ- ಪ್ರಜಾ ಟೈಮ್ಸ್ ಕನ್ನಡ ನ್ಯೂಸ್

ವರದಿ- ದಯಾನಂದ ಪೂಜಾರಿ

error: Content is protected !!