ಅಥಣಿಯ ಐಗಳಿಯಲ್ಲಿ ನೂತನ ಪೋಲಿಸ್ ಠಾಣೆ ಉದ್ಘಾಟನೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಐಗಳಿ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆಗೊಂಡಿತು. ಈ ಸಮಯದಲ್ಲಿ ಶ್ರೀ ಮಹೇಶ್ ಕುಮಟಳ್ಳಿ ಮಾನ್ಯ MLA, ಶ್ರೀ ಲಕ್ಷ್ಮಣ ಸವದಿ ಮಾನ್ಯ MLC ಹಾಗೂ ವಿವಿಧ ಜನಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳು, ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. *ಐಗಳಿ ಪೊಲೀಸ್ ಠಾಣೆಯ ನೂತನ ಕಟ್ಟಡ* *ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ* *ಮಾಜಿ ಡಿಸಿಎಂ ಶ್ರೀ ಲಕ್ಷ್ಮಣ ಸಂ. ಸವದಿ**

ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ
ದಿ. 03-10-22 ರಂದು ಜರುಗಿದ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ *ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ* *ರಾಜ್ಯ ಉಪಾಧ್ಯಕ್ಷರು, ವಿ.ಪ. *ಸದಸ್ಯರಾದ ಸನ್ಮಾನ್ಯ* *ಶ್ರೀ ಲಕ್ಷ್ಮಣ ಸಂ. ಸವದಿಯವರು* ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಮಹೇಶ ಕುಮಠಳ್ಳಿ, ಶ್ರೀ ಅರವಿಂದರಾವ್ ದೇಶಪಾಂಡೆ, ಐಗಳಿ ಗ್ರಾ.ಪಂ. ಅಧ್ಯಕ್ಷೆ ರಾಜಶ್ರೀ ಶಂ. ಪಾಟೀಲ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಸಂಜಯ ಪಾಟೀಲ, ಹೆಚ್ಚುವರಿ ಎಸ್‌ಪಿ ಶ್ರೀ ಮಹಾನಿಂಗ ನಂದಗಾಂವ, ಅಥಣಿ ಡಿವೈಎಸ್‌ಪಿ ಶ್ರೀ ಶ್ರೀಪಾದ ಜಲ್ದೆ, ಸಿಪಿಐ ಶ್ರೀ ರವೀಂದ್ರ ನಾಯ್ಕೋಡಿ, ಹಾರೂಗೇರಿ ಸಿಪಿಐ ಶ್ರೀ ಕರೆಪ್ಪ ಹಟ್ಟಿ, ರಾಯಬಾಗ ಪಿ.ಐ. ಶ್ರೀ ಹಸನ ಮುಲ್ಲಾ, ಅಥಣಿ ಪಿಎಸ್‌ಐ ಶ್ರೀ ಶಿವಶಂಕರ ಮುಕರಿ, ಐಗಳಿ ಪಿಎಸ್‌ಐ ಶ್ರೀ ಶಿವಾಜಿ ಪವಾರ, ಕಾಗವಾಡ ಪಿಎಸ್‌ಐ ಶ್ರೀ ಭೀಮಪ್ಪ ರಬಕವಿ ಸೇರಿದಂತೆ ಇತರ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ ಗಣ್ಯಮಾನ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ.- ಮಹೇಶ ಶರ್ಮಾ

error: Content is protected !!