ದೇಶಾದ್ಯಂತ ಒಂದು ಗಂಟೆಯಿಂದ ಯುಪಿಐ ವಹಿವಾಟು ಸ್ಥಗಿತಗೊಂಡು ಬಳಕೆದಾರರಿಗೆ ತೊಂದರೆಯಾಗಿದೆ.ಸಾವಿರಾರು ಬಳಕೆದಾರರು ತಮಗೆ ಆದ ತೊಂದರೆಯ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಯುಪಿಐ ಏಕೆ ಕೆಲಸ ಮಾಡುತ್ತಿಲ್ಲ, ಅದು ಸ್ಥಗಿತಗೊಂಡು ಒಂದು ಗಂಟೆಯಾಗಿದೆ ಎಂದು ಬಳಕೆದಾರರು ದೂರಿದ್ದಾರೆ.
ಎಲ್ಲಾ ಅಪ್ಲಿಕೇಶನ್ ಗಳಲ್ಲಿ ಯುಪಿಐ ಡೌನ್ ಆಗಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಅಪ್ಲಿಕೇಶನ್ ಗಳಲ್ಲಿ ಯುಪಿಐ ಡೌನ್ ಆಗಿದೆ ಎಂದು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ಯುಪಿಐ ಸರ್ವರ್ ಡೌನ್ ಆಗಿದೆ ಎಂದು ಬಳಕೆದಾರರು ದೂರಿದ್ದಾರೆ.
@UPI_NPCI why is upi not working .its been an hour since it is down.
— Kapil (@Kapil76643848) December 31, 2022