ಇವಳೆಂಥಾ ಧೂರ್ತ ಹೆಂಗಸು!; ಪುತ್ರನ ಕಾಮದಾಹ ತಣಿಸಲು ಬಾಲಕಿಗೆ ಡ್ರಗ್ಸ್​ ಕೊಟ್ಟು, ಎಚ್ಚರ ತಪ್ಪಿಸಿದ ತಾಯಿ

ದಾರಿ ತಪ್ಪಿದ ಮಗನಿಗೆ ಬುದ್ಧಿ ಹೇಳಿ, ಶಿಕ್ಷಿಸಿ ಸರಿ ದಾರಿಗೆ ತರಬೇಕಾಗಿದ್ದ ಅಮ್ಮ ತಲೆಹಿಡುಕ ಕೆಲಸ ಮಾಡಿ, ಈಗ ಆ ತಾಯಿ-ಮಗ ಇಬ್ಬರೂ ಬಂಧಿತರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಮಗ ಅತ್ಯಾಚಾರ ಮಾಡಲು ಅವನ ತಾಯಿಯೇ ಸಹಾಯ ಮಾಡಿದ್ದಾಳೆ.

ಕೋಲ್ಕತ್ತದ ಹರಿದೇವ್​​ಪುರ ನಿವಾಸಿಗಳಾದ ಇವರ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಈ ಮಹಿಳೆ ಬ್ಯುಟಿಷಿಯನ್​ ಆಗಿದ್ದಳು. ಆಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ ಹುಡುಗಿ ಬ್ಯೂಟಿಷಿಯನ್ ಕೋರ್ಸ್ ಮಾಡಲು ಮಹಿಳೆ ಬಳಿ ಬರುತ್ತಿದ್ದಳು. ಇವರ ಮನೆ ಸಮೀಪವೇ ಇದ್ದ ಪಾರ್ಲರ್​​ನಲ್ಲಿ ತರಬೇತಿ ಪಡೆಯುತ್ತಿದ್ದಳು. ಈಗೆರಡು ತಿಂಗಳ ಹಿಂದೆ, ಅಂದರೆ ಅಕ್ಟೋಬರ್​ನಲ್ಲಿ ಮಹಿಳೆ ಆ ಹುಡುಗಿಯನ್ನು ತಮ್ಮ ಮನೆಗೆ ಆಹ್ವಾನಿಸಿದಳು. ಪರಿಚಿತರೇ ಅಲ್ಲವಾ ಎಂದು ಹುಡುಗಿಯೂ ಹೋಗಿದ್ದಾಳೆ. ಆದರೆ ಅಲ್ಲಿ ದುರಂತವೇ ನಡೆದಿದೆ.

ಈ ಬಾಲಕಿ ಹೋದ ತಕ್ಷಣ ಆಕೆಗೆ ತಿನ್ನಲೆಂದು ಮಹಿಳೆ ಲೇಸ್​ ಕೊಟ್ಟಳು. ಅದು ಬರೀ ಲೇಸ್​ ಆಗಿರಲಿಲ್ಲ. ಮಾದಕ ದ್ರವ್ಯ ಸವರಿದ ತಿನಿಸಾಗಿತ್ತು. ಅದನ್ನು ತಿನ್ನುತ್ತಿದ್ದಂತೆ ಹುಡುಗಿ ಪ್ರಜ್ಞೆ ತಪ್ಪಿ ಬಿದ್ದಳು. ಮೈಮೇಲೆ ಎಚ್ಚರ ಇಲ್ಲದೆ ಬಿದ್ದ ಬಾಲಕಿ ಮೇಲೆ ಆ ಧೂರ್ತ ಮಹಿಳೆಯ ಕೆಟ್ಟ ಮಗ ಹಲವು ಬಾರಿ ರೇಪ್​ ಮಾಡಿದ್ದಾನೆ. ತನ್ನ ಮಗಳ ವಯಸ್ಸಿನ ಹುಡುಗಿ ಅತ್ಯಾಚಾರಕ್ಕೀಡಾಗಿ ನಲುಗುತ್ತಿದ್ದರೆ, ಈಕೆ ಕದಲದೆ ನಿಂತಿದ್ದಳು.

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಅರೆಬರೆ ಎಚ್ಚರವಾದಾಗ ತನ್ನ ಮೇಲೆ ಅತ್ಯಾಚಾರ ಆಗಿದ್ದು ಗೊತ್ತಾಗಿದೆ. ಅಲ್ಲಿಂದ ಮೌನವಾಗಿಯೇ ಮನೆಗೆ ಹೋಗಿದ್ದಳು. ಪೊಲೀಸರಿಗೆ ಹೇಳಲು ಭಯವಾಗಿಯೇ ಸುಮ್ಮನಿದ್ದಳು. ಕೊನೆಗೂ ಆಕೆಯ ಸ್ನೇಹಿತರು ಧೈರ್ಯ ತುಂಬಿದ ಮೇಲೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಅಮ್ಮ-ಮಗನನ್ನು ಅರೆಸ್ಟ್ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!