ಅಪ್ರಾಪ್ತೆ ಅತ್ಯಾಚಾರ ಕೇಸ್​: ಬಂಧಿತ ಆರೋಪಿಯ ವೈದ್ಯಕೀಯ ಪರೀಕ್ಷಾ ವರದಿ ನೋಡಿ ಪೊಲೀಸರೇ ತಬ್ಬಿಬ್ಬು!

ಅತ್ಯಾಚಾರ ಪ್ರಕರಣವೊಂದು ಪೊಲೀಸರನ್ನೇ ತಬ್ಬಿಬ್ಬು ಮಾಡಿದ ಪ್ರಸಂಗ ರಾಜಸ್ಥಾನದ ಸಿರೋಹಿಯಲ್ಲಿ ನಡೆದಿದೆ.

ವಾಶ್​ ರೂಮ್​ಗೆ ತೆರಳಿದಾಗ ನನ್ನ ಮೇಲೆ ಅತ್ಯಾಚಾರ ನಡೆಯಿತು. ಆರೋಪಿ ನನ್ನನ್ನು ಹೆಸರಿಸಿ ಆಟೋದಲ್ಲಿ ಮನೆಗೆ ಕಳುಹಿಸಿದನು ಎಂದು ನ.28ರಂದು ಅಪ್ರಾಪ್ತೆಯೊಬ್ಬಳು ಸಿರೋಹಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸಂತ್ರಸ್ತೆಯ ನೆರವಿನಿಂದ ಡಿ.5ರಂದು ಆರೋಪಿಯನ್ನು ಬಂಧಿಸಿದರು.

ಇದಾದ ಬಳಿಕ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆ ಒಳಪಡಿಸಿದಾಗ ಆತ ಪುರುಷನಲ್ಲ ಮಹಿಳೆ ಎಂಬ ಶಾಕಿಂಗ್​ ಸಂಗತಿ ಬಯಲಾಗಿದ್ದು, ಪೊಲೀಸರೇ ತಬ್ಬಿಬ್ಬಾಗಿದ್ದಾರೆ. ಪುರುಷನ ವೇಷದಲ್ಲಿದ್ದ ಮಹಿಳೆಯಿಂದಲೇ ಕೃತ್ಯ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.

ಆರಂಭದಲ್ಲಿ ಅತ್ಯಾಚಾರ ಎಂದು ದೂರು ದಾಖಲಾಗಿತ್ತು. ಆದರೆ, ಯಾವಾಗ ಆರೋಪಿ ಪುರುಷನಲ್ಲ, ಮಹಿಳೆ ಅಂತಾ ಗೊತ್ತಾದಾ ಅತ್ಯಾಚಾರ ಪ್ರಕರಣವನ್ನು ಕೈಬಿಟ್ಟು, ಅಪಹರಣ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಉದ್ದೇಶ ತಕ್ಷಣಕ್ಕೆ ತಿಳಿದುಬಂದಿಲ್ಲ. ಪೊಲೀಸರ ಪ್ರಕಾರ, ಪತಿಯಿಂದ ದೂರವಾಗಿರುವ ಆರೋಪಿ ಮಹಿಳೆ ತನ್ನ ಜೀವನೋಪಾಯಕ್ಕಾಗಿ ಮಹಿಳೆ ವೇಷ ಧರಿಸಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಮದುವೆಗಳಲ್ಲಿ ಮೇಜುಗಳನ್ನು ಹಾಕುವುದು, ಅಡುಗೆ ಮಾಡುವುದು ಅಥವಾ ದೀಪಗಳನ್ನು ಹಿಡಿಯುವುದು ಮುಂತಾದ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

error: Content is protected !!