150ಕ್ಕೂ ಹೆಚ್ಚು ಕೆಜಿಯ ಗೋ ಮಾಂಸ ವಶಕ್ಕೆ ಪಡೆದ ಬಜರಂಗ ದಳ ಕಾರ್ಯಕರ್ತರು

ಭಜರಂಗ ದಳದಿಂದ ಗೋ ಹಂತಕರ ವಿರುದ್ಧ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆ ವೇಳೆ 150ಕ್ಕೂ ಹೆಚ್ಚು ಕೆಜಿಯ ಗೋ ಮಾಂಸವನ್ನು ಕಾರ್ಯಕರ್ತರು ವಶಕ್ಕೆ ಪಡೆದಿದ್ದಾರೆ.ತುಮಕೂರು ನಗರದ ಹೊರವಲಯದ ಮರಳೂರು ದಿಣ್ಣೆಯಲ್ಲಿ ಭಜರಂಗ ದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಗೋ ಮಾಂಸ ಮಾರಾಟ ಮಾಡುತ್ತಿದ್ದ ದಸ್ತಗಿರ್ ಅಹಮದ್ (30) ಎಂಬ ವ್ಯಕ್ತಿ ಸಿಕ್ಕಿಬಿದ್ದಿದ್ದು, ಈತನನ್ನ ಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ.

ದಸ್ತಗಿರ್ ಅಹಮದ್ ತುಮಕೂರಿನ ಸದಾಶಿವ ನಗರದ ನಿವಾಸಿ. ತುಮಕೂರು ನಗರದ ಹೊರವಲಯದ ಮರಳೂರು ದಿಣ್ಣೆಯಲ್ಲಿ ಅಕ್ರಮ ಗೋ ಮಾಂಸ ಮಾರಾಟ ಮಾಡುತ್ತಿದ್ದ. ಅಹಮದ್ ಕದ್ದು ಗೋ ಮಾಂಸ ಮಾರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಭಜರಂಗ ದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಆತ ಸಿಕ್ಕಿಬಿದ್ದಿದ್ದಾನೆ. ಬಳಿಕ ಗೋ ಹಂತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!