ಅರೆಬೆತ್ತಲೆಯಾಗಿ ಎರಡನೇ ಮಹಡಿಗೆ ಹತ್ತಿ ಒಂಟಿ ಮಹಿಳೆ ಇದ್ದ ಮನೆ ಬಾಗಿಲು ಬಡಿದ; ಇಡೀ ಕಟ್ಟಡದಲ್ಲಿ ಯಾರೂ ಇಲ್ಲದಾಗ ಅವಾಂತರ!

ಅರೆಬೆತ್ತಲೆ ಅವಸ್ಥೆಯಲ್ಲಿದ್ದ ಮಾನಸಿಕ ಅಸ್ವಸ್ಥನೊಬ್ಬ ಮನೆಯ ಎರಡನೇ ಮಹಡಿ ಹತ್ತಿ ಒಂಟಿ ಮಹಿಳೆಯಿದ್ದ ಮನೆಯ ಬಾಗಿಲು ಬಡಿದು, ಬಾಲ್ಕನಿಯಲ್ಲಿದ್ದ ಹೂಗಿಡಗಳನ್ನು ಕಿತ್ತೆಸೆದು ಕೇಕೆ ಹಾಕಿ ಆವಾಂತರ ಸೃಷ್ಟಿಸಿದ್ದಾನೆ.

ಮಂಗಳವಾರ ಸಂಜೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆ ಹಿಂಭಾಗದ ಎಐಆರ್ ರೇಡಿಯೋ ಸ್ಟೇಷನ್ ಬಡಾವಣೆಯೊಂದರ ಮಹಡಿ ಮನೆ ಏರಿದ ಅಪರಿಚಿತ ವ್ಯಕ್ತಿಯ ಹುಚ್ಚಾಟಕ್ಕೆ ಮನೆಯಲ್ಲಿದ್ದ ಮಹಿಳೆ ಗಾಬರಿಯಾಗಿ ಬಾಯಿಬಡಿದುಕೊಂಡಿದ್ದಾರೆ.

ಕಿಟಕಿ, ಬಾಗಿಲು ಬಡಿದು ಹುಚ್ಚುಚ್ಚಾಗಿ ಕುಣಿದ ಅಪರಿಚಿತನ ಅವಾಂತರಕ್ಕೆ ನೆರೆಹೊರೆಯವರು ಕಂಗಾಲಾಗಿದ್ದಾರೆ. ಮಹಿಳೆ ವಾಸವಿದ್ದ ಕಟ್ಟಡದ ಮಾಲೀಕರು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ, ಇಡೀ ಕಟ್ಟಡದಲ್ಲಿ ಯಾರೂ ಇಲ್ಲದ ವೇಳೆ ಈ ಪ್ರಕರಣ ನಡೆದಿರುವುದರಿಂದ ಮಹಿಳೆಯ ಜೀವ ಬಾಯಿಗೆ ಬಂದಂತಾಗಿತ್ತು.

112ಗೆ ಕರೆ: ಕಿರುಚಾಟದ ಶಬ್ದ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಮಾನಸಿಕ ಅಸ್ವಸ್ಥನ ಗಲಾಟೆ ತಡೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸ್ಥಳೀಯರೊಬ್ಬರು ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗಸ್ತುವಾಹನದ ಪೊಲೀಸರು ಆತನನ್ನು ಹುಚ್ಚಾಟ ಮುಂದುವರಿಸಿದ್ದ ಅಪರಿಚಿತನನ್ನು ಉಪಾಯವಾಗಿ ಮಹಡಿಯಿಂದ ಕೆಳಗಿಳಿಸಿ ವಿಚಾರಣೆ ನಡೆಸಿದ್ದಾರೆ, ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕಳುಹಿಸಲಾಗಿದೆ

error: Content is protected !!