ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆಯಿಟ್ಟಿದ್ದ ಪ್ರೊಫೆಸರ್ ಸಸ್ಪೆಂಡ್

ಲೈಂಗಿಕವಾಗಿ ಸಹಕರಿಸುವಂತೆ ವಿದ್ಯಾರ್ಥಿನಿಯರಲ್ಲಿ ಬೇಡಿಕೆಯಿಟ್ಟ ಪ್ರೊಫೆಸರ್ ನನ್ನ ಸಸ್ಪೆಂಡ್ ಮಾಡಿರೋ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿನಡೆದಿದೆ.

ವಿಜ್ಞಾನ ಪ್ರಾಧ್ಯಾಪಕರೊಬ್ಬರನ್ನು ಎಂ.ವಿ.ಎಂ. ವಿಜ್ಞಾನ ಮತ್ತು ಗೃಹ ವಿಜ್ಞಾನ ಕಾಲೇಜಿನ ಟ್ರಸ್ಟಿಗಳು ಸಸ್ಪೆಂಡ್ ಮಾಡಿದ್ದಾರೆ.

ವಿದ್ಯಾರ್ಥಿನಿಯರು ಮೂರು ತಿಂಗಳ ಹಿಂದೆಯೇ ಕಾಲೇಜು ಅಧಿಕಾರಿಗಳಿಗೆ ಹಾಗೂ ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮಾಧ್ಯಮಗಳು ಮತ್ತು ವಿದ್ಯಾರ್ಥಿಗಳ ಒಕ್ಕೂಟವು ಈ ಬಗ್ಗೆ ಒತ್ತಾಯಿಸಿದ ನಂತರವೇ, ಕಾಲೇಜು ಮತ್ತು ಸಮಿತಿಯು ತನಿಖೆಗೆ ನಿರ್ಧರಿಸಿತು.

ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಸಂಜಯ್ ತಾರಯ್ಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಕಾಲೇಜಿನ ಟ್ರಸ್ಟಿ ಪರಶೋತ್ತಮ್ ಪಿಪಾಲಿಯಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ವಿರೋಧಿ ಸಮಿತಿಯು ದೂರಿನಲ್ಲಿ ಸಾಕಷ್ಟು ಸಾಕ್ಷಿಗಳನ್ನು ಕಂಡುಕೊಂಡು ವರದಿಯನ್ನು ಕಾಲೇಜು ಟ್ರಸ್ಟ್ ಗೆ ಸಲ್ಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

error: Content is protected !!