ಕೇಂದ್ರ ಗುಪ್ತಚರ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನ..! ಇಂದೇ ಅರ್ಜಿ ಸಲ್ಲಿಸಿ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಉಪ ಕೇಂದ್ರ ಗುಪ್ತಚರ ಅಧಿಕಾರಿ ಮತ್ತು ಇತರೆ ಹುದ್ದೆಗಳ (UPSC ನೇಮಕಾತಿ 2023) ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು UPSC ಯ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯವಿವರಗಳು:

ಒಟ್ಟು ಹುದ್ದೆಗಳ ಸಂಖ್ಯೆ- 10

ವಿಜ್ಞಾನಿ ‘ಬಿ’: 2 ಹುದ್ದೆ

ಉಪ ಕೇಂದ್ರೀಯ ಗುಪ್ತಚರ ಅಧಿಕಾರಿ: 4 ಹುದ್ದೆ

ಜಂಟಿ ಸಹಾಯಕ ನಿರ್ದೇಶಕ: 3 ಹುದ್ದೆ

ಸಹಾಯಕ ಕಾರ್ಮಿಕ ಆಯುಕ್ತ: 1 ಹುದ್ದೆ

ಅರ್ಹತಾಮಾನದಂಡಗಳು:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವಂತೆ ಸಂಬಂಧಿತ ಅರ್ಹತೆಯನ್ನು ಹೊಂದಿರಬೇಕು.

ಅರ್ಜಿಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.25/- ಅನ್ನು ಪಾವತಿಸಬೇಕಾಗುತ್ತದೆ. ಇನ್ನು SC/ST/PWBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 12, 2023

error: Content is protected !!