ಸರ್ಕಲ್​ ಇನ್ಸ್​ಪೆಕ್ಟರ್​ ಜತೆ ಮಹಿಳಾ ಎಸ್​ಐ ರೊಮ್ಯಾನ್ಸ್​: ಗಂಡನಿದ್ರೂ ಅಕ್ರಮ ಸಂಬಂಧ ಹೊಂದಿದ್ದ ಲೇಡಿ ಎಸ್​ಐಗೆ ಶಾಕ್​

ಸರ್ಕಲ್​ ಇನ್ಸ್​ಪೆಕ್ಟರ್​ ಹಾಗೂ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ನಡುವಿನ ಲವ್ವಿಡವ್ವಿ ಪ್ರಕರಣ ತೆಲಂಗಾಣದ ವಾರಂಗಲ್​ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಇಬ್ಬರನ್ನೂ ವಾರಂಗಲ್​ ಪೊಲೀಸ್​ ಕಮಿಷನರ್​ ರಂಗನಾಥ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಗೆಸಿಗೊಂಡ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ರಾಯಲ ವೆಂಕಟೇಶ್ವರಲು ಮತ್ತು ದಮೇರಾ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಹರಿಪ್ರಿಯಾ ಅಮಾನತಾದ ಅಧಿಕಾರಿಗಳು. ಇಬ್ಬರ ಮಿತಿ ಮೀರಿದ ವರ್ತನೆಯಿಂದಾಗಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಎಸ್​ಐ ಹರಿಪ್ರಿಯಾ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ಆದರೂ ಮೊದಲಿನಿಂದಲೂ ಪರಿಚಯವಿದ್ದ ಸಿಐ ವೆಂಕಟೇಶ್ವರಲು ಜೊತೆ ತಮ್ಮ ರೊಮ್ಯಾನ್ಸ್​ ಮುಂದುವರಿಸಿದ್ದರು. ಪತ್ನಿ ಹರಿಪ್ರಿಯಾ ವರ್ತನೆಯ ಬಗ್ಗೆ ಗಂಡನಿಗೆ ಅನುಮಾನವಿತ್ತು. ಅಲ್ಲದೆ, ಪತ್ನಿಯ ವಾಟ್ಸ್​ಆಯಪ್​ ಚಾಟ್​ ಅನ್ನು ಗಂಡ ಗಮನಿಸಿದ್ದ. ಸಿಐ ಮತ್ತು ಎಸ್​ಐ ನಡುವೆ ತುಂಬಾ ಸಲುಗೆಯ ಚಾಟಿಂಗ್​ ನಡೆಯುತ್ತಿತ್ತು. ಬಳಿಕ ವಾರಂಗಲ್​ ಕಮಿಷನರ್​ಗೆ ಹರಿಪ್ರಿಯಾ ಗಂಡ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸ್​ ಕಮಿಷನರ್​ಗೆ ಸಿಐ ಮತ್ತು ಎಸ್​ಐ ನಡುವೆ ಲವ್ವಿಡವ್ವಿ ಇರುವುದು ತಿಳಿದಿದೆ. ತಕ್ಷಣವೇ ಇಬ್ಬರನ್ನು ಅಮಾನತು ಮಾಡುವ ಮೂಲಕ ಕ್ರಮ ಜರುಗಿಸಿದ್ದಾರೆ. (ಏಜೆನ್ಸೀಸ್

error: Content is protected !!