998ಕೆಜಿ ಗಾಂಜಾ ನಾಶ ಮಾಡಿದ ಪೊಲೀಸರು

ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿ ವತಿಯಿಂದ ಅಕ್ರಮವಾಗಿ ವಶಪಡಿಸಿಕೊಂಡ ಗಾಂಜಾವನ್ನು ನಾಶಪಡಿಸಿದ್ದಾರೆ.

ಸುಮಾರು 998ಕೆಜಿ 336 ಗ್ರಾಂ ಗಾಂಜಾ ಪೊಲೀಸರು ನಾಶ ಸುಟ್ಟುಹಾಕಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಧನ್ನೂರಾ ಗ್ರಾಮದಲ್ಲರೋ ಇನ್ವೇರೋ ಬಯೋಟಿಕ್ ಜೈವಿಕ ತಾಜ್ಯ ವಿಲೇವಾರಿ ಘಟಕದ ಕುಲುಮೆಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ವಶ ಪಡಿಸಿಕೊಂಡಿದ್ದ ಗಾಂಜಾ ನಾಶ ಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ಹೆಚ್ಚುವರಿ ಎಸ್‌ಪಿ ಮಹೇಶ್ ಮೆಗ್ಗಣ್ಣನವರ್, ಪ್ರಥ್‌ವಿಕ್ ಶಂಕರ್ ಸೇರಿದಂತೆ ಹಲವು ಅಧಿಕಾರಿಗಳ ಉಪಸ್ಥಿತರಿದ್ದರು.

error: Content is protected !!