10 ಬಾರಿ ಶಾಸಕರಾಗಿದ್ದ ಪ್ರಭಾವಿ ನಾಯಕ ಕಾಂಗ್ರೆಸ್‌ಗೆ ಗುಡ್‌ಬೈ – BJP ಸೇರ್ಪಡೆ

ಗುಜರಾತ್ ವಿಧಾನಸಭಾ ಚುನಾವಣೆ (Gujarat Election) ಸಮೀಪಿಸುತ್ತಿರುವಾಗಲೇ 10 ಬಾರಿ ಶಾಸಕರಾಗಿದ್ದ ಪ್ರಭಾವಿ ನಾಯಕ ಮೋಹನ್‌ಸಿನ್ಹ್ ರಥ್ವಾ (Mohansinh Rathva) ಕಾಂಗ್ರೆಸ್ (Congress) ತೊರೆದಿದ್ದಾರೆ.

78 ವರ್ಷದ ರಥ್ವಾ ಕಾಂಗ್ರೆಸ್ (Congress) ತೊರೆದು ಬಿಜೆಪಿ (BJP) ಸೇರ್ಪಡೆಗೊಂಡಿದ್ದಾರೆ. ಛೋಟಾ ಉದಯಪುರ ಪ್ರತಿನಿಧಿಸಿದ್ದ ಶಾಸಕ ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಜಗದೀಶ್ ಠಾಕೋರ್ ಅವರಿಗೆ ಕಳುಹಿಸಿದ್ದಾರೆ. ಬುಡಕಟ್ಟು ಸಮುದಾಯದ ಪ್ರಭಾವಿನಾಯಕರಾಗಿರುವ ಋಥ್ವಾ 2012ಕ್ಕೂ ಛೋಟಾ ಉದಯಪುರ ಜಿಲ್ಲೆಯ ಪಾವಿ-ಜೆಟ್ಪುರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿಲ್ಲ ಎಂಬುದಾಗಿ ಘೋಷಿಸಿದ್ದು, ಅವರ ಮಗ ರಾಜೇಂದ್ರಸಿನ್ಹ್ ರಥ್ವಾ ಅವರ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.

ಬಿಜೆಪಿಯಿಂದ ತನ್ನ ಮಗನಿಗೆ ಟಿಕೆಟ್ ನೀಡುವುದಾಗಿ ಶಾಸಕರು ಖಚಿತಪಡಿಸಿದ ನಂತರ ಮೋಹನ್‌ಸಿನ್ಹ್ ರಥ್ವಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಬುಡಕಟ್ಟು ಪ್ರದೇಶಗಳಲ್ಲಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾಡಿದ ಕೆಲಸದಿಂದ ನಾನು ಪ್ರಭಾವಿತನಾಗಿದ್ದೆ. ಅಲ್ಲದೆ ನನ್ನ ಮಗ ರಾಜೇಂದ್ರಸಿನ್ಹ್ ಬಿಜೆಪಿಗೆ ಸೇರಬೇಕು ಎಂಬ ಭಾವನೆ ಹೊಂದಿದ್ದರು ಅದಕ್ಕಾಗಿ ಕಾಂಗ್ರೆಸ್ ತೊರೆದಿದ್ದೇನೆ ಎಂದು ಹೇಳಿದ್ದಾರೆ.

ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ, ಡಿಸೆಂಬರ್ 8 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

error: Content is protected !!