ಸಿನಿಮಾ ಸ್ಟಾರ್ ಗಳಿಗೇಕೆ ಸ್ಮಾರಕ ಎಂದ ನಟ ಚೇತನ್

ಚಲನಚಿತ್ರ ತಾರೆಯರಿಗೆ ಸಾರ್ವಜನಿಕ ಜಾಗ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಮಾರಕ ನಿರ್ಮಾಣ ಮಾಡಬಾರದು ಎಂದು ನಟ ಚೇತನ್ ಪ್ರಶ್ನೆ ಮಾಡಿದ್ದಾರೆ.  ಹಲವಾರು ಕನ್ನಡಿಗರಂತೆಯೇ ನಟ, ನಟಿಯರು ಕೂಡ ಕೆಲಸ ಮಾಡಿ ಸಂಪಾದಿಸುತ್ತಾರೆ.

ಈಗಾಗಲೇ ನಮ್ಮ ಸಮಾಜದಲ್ಲಿ ಅವರಿಗೆ ಅನಗತ್ಯ ಪ್ರಚಾರ ನೀಡಿದ್ದೇವೆ. ಅವರ ಸಿನಿಮಾ ಯಶಸ್ಸಿಗೆ ಅನಗತ್ಯವಾಗಿಯೇ ಗಮನ ಸೆಳೆಯುತ್ತಾರೆ. ಹಾಗಾಗಿ ಸ್ಮಾರಕಗಳನ್ನು ಕಟ್ಟದಂತೆ ಅವರು ಮನವಿ ಮಾಡಿದ್ದಾರೆ.

ನಾಡಿಗೆ ಬೇಕಾಗಿದ್ದು ಸ್ಟಾರ್ ಗಳ ಸ್ಮಾರಕಗಳ ಬದಲು ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ವಸ್ತು ಸಂಗ್ರಹಾಲಯಗಳು. ನಮ್ಮ ನೆಲ ಸ್ಮಾರಕಗಳಿಗಿಂತ ವಸ್ತು ಸಂಗ್ರಹಾಲಯಗಳಿಗೆ ಬಳಕೆಯಾಗಲಿ ಎಂದು ನಟ ಚೇತನ್ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆ ಆಗಿದ್ದು, ಈ ಬೆನ್ನಲ್ಲೇ ಚೇತನ್ ಆಡಿರುವ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

The post ಸಿನಿಮಾ ಸ್ಟಾರ್ ಗಳಿಗೇಕೆ ಸ್ಮಾರಕ ಎಂದ ನಟ ಚೇತನ್ appeared first on .

error: Content is protected !!