ರಮ್ಯಾಗೆ ಕ್ರಿಮಿನಲ್ ಜೊತೆ ಲಿಂಕ್ ಇದೆ: ಹೊಸ ಬಾಂಬ್ ಸಿಡಿಸಿದ ನಟ ನರೇಶ್

ತೆಲುಗು ನಟ ನರೇಶ್ ಹಾಗೂ ಪತ್ನಿ ರಮ್ಯಾ ರಗಳೆ ಮತ್ತೆ ಮುಂದುವರೆದಿದೆ. ಪತ್ನಿ ರಮ್ಯಾಳಿಂದ ತಮಗೆ ಕಿರುಕುಳ ಆಗುತ್ತಿದೆ. ಬೇಗ ಡಿವೋರ್ಸ್ ಕೊಡಿ ಎಂದು ಇತ್ತೀಚೆಗಷ್ಟೇ ನರೇಶ್ ಕೋರ್ಟ್ ಗೆ ಮೊರೆ ಹೋಗಿದ್ದರು. ಇದೀಗ ಪತ್ರಿಕಾಗೋಷ್ಠಿ ನಡೆಸಿ, ರಮ್ಯಾ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದಾರೆ.

ರಮ್ಯಾರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿರುವ ನರೇಶ್ ಆಕೆಗೆ ಕ್ರಿಮಿನಲ್ ಜೊತೆ ಒಡನಾಟ ಇದೆ ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನರೇಶ್, ‘ಜೀವನದಲ್ಲಿ ನನಗೆ ಬೇಸರವಾಗಿ ಸನ್ಯಾಸತ್ವ ತಗೆದುಕೊಳ್ಳಬೇಕು ಎಂದು ಹೊರಟಾಗ ಭೇಟಿಯಾದವರು ರಮ್ಯಾ. ತಮಗೆ ಶುಗರ್ ಇದೆ, ನನ್ನಂಥವಳನ್ನು ಯಾರು ಮದುವೆ ಆಗುತ್ತಾರೆ ಎಂದು ಕಣ್ಣೀರಿಟ್ಟಳು. ಅಲ್ಲದೇ ನನ್ನ ತಾಯಿಯು ಕೂಡ ಆಕೆಯ ಬಗ್ಗೆ ಒಲವು ತೋರಿದ್ದರಿಂದ ಮದುವೆಯಾದೆ. ಆನಂತರದ ರಮ್ಯಾನೇ ಬೇರೆ ಇದ್ದಳು. ಕಂಠಪೂರ್ತಿ ಕುಡಿದು ಬರುತ್ತಿದ್ದಳು. ಗಲಾಟೆ ಮಾಡುತ್ತಿದ್ದಳು’ ಎಂದೆಲ್ಲ ಆರೋಪಿಸಿದ್ದಾರೆ.

‘ಆಕೆ ಮಾಡಿದ ಎಲ್ಲ ರಂಪಾಟವನ್ನೂ ಸಹಿಸಿಕೊಂಡು ಬಂದೆ. ಬ್ಯುಸಿನೆಸ್ ಮಾಡುತ್ತೇನೆ ಅಂದ್ಳು. ಅದಕ್ಕೂ ಸಪೋರ್ಟ್ ಮಾಡಿದೆ. ಬ್ಯುಸಿನೆಸ್ ಹೆಸರಲ್ಲಿ ಓಡಾಡೋಕೆ ಶುರು ಮಾಡಿದಳು. ಹದಿನೈದು ದಿನ ಮಾತ್ರ ಮನೆಯಲ್ಲಿ ಇರುತ್ತಿದ್ದಳು. ಹೇಳ್ತಾ ಹೋದರೆ ತುಂಬಾನೇ ಇದೆ. ಹೀಗಾಗಿ ರಮ್ಯಾ ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ನಾನೂ ಹೇಳಬೇಕಾಗಿದ್ದು ತುಂಬಾ ಇದೆ. ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಎಚ್ಚರಿಕೆಯನ್ನೂ ನರೇಶ್ ಕೊಟ್ಟಿದ್ದಾರೆ.

ರಮ್ಯಾ ಅವರು ಕ್ರಿಮಿನಲ್ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂದೂ ನರೇಶ್ ಆರೋಪ ಮಾಡಿದ್ದಾರೆ. ತಮ್ಮ ಮೊಬೈಲ್ ಅನ್ನು ಟ್ರ್ಯಾಪ್ ಮಾಡಿಸಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ. ನಾನು ಯಾರ ಜೊತೆ ಬೇಕಾದರೂ ಇರುತ್ತೇನೆ. ಅದು ನನ್ನ ಸ್ವಾತಂತ್ರ್ಯ. ಆದರೆ, ತೊಂದರೆ ಮಾಡುವುದನ್ನು ನಾನು ಸಹಿಸಲ್ಲ. ಪವಿತ್ರಾಳ ಮೇಲೆ ಸ್ಟ್ರಿಂಗ್ ಆಪರೇಷನ್ ಮಾಡಿಸ್ತೀಯಾ, ಇದೇ ರೀತಿ ಮುಂದುವರೆದರೆ ಬೇರೆ ರೀತಿಯಲ್ಲೇ ನಾನು ಉತ್ತರ ಕೊಡುತ್ತೇನೆ’ ಎಂದು ನರೇಶ್ ಎಚ್ಚರಿಕೆ ನೀಡಿದ್ದಾರೆ.

The post ರಮ್ಯಾಗೆ ಕ್ರಿಮಿನಲ್ ಜೊತೆ ಲಿಂಕ್ ಇದೆ: ಹೊಸ ಬಾಂಬ್ ಸಿಡಿಸಿದ ನಟ ನರೇಶ್ appeared first on .

error: Content is protected !!