ವರದಿ: ಶಶಿಕಾಂತ ಪುಂಡಿಪಲ್ಲೆ
*ನರೇಗಾ ಕಾಮಗಾರಿ ಪರಿಶೀಲನೆ- ಮೆಚ್ಚುಗೆ*
ಕೋಹಳ್ಳಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅತೀ ಹೆಚ್ಚು ಕಾಮಗಾರಿಗಳನ್ನು ಕೋಹಳ್ಳಿ ಗ್ರಾಮವು ಅಭಿವೃದ್ಧಿಯುತ್ತ ಸಾಗಿದೆ ಎಂದು ಅಥಣಿ ತಾಪಂ ಸಹಾಯಕ ನಿರ್ದೇಶಕರಾದ ಕೊತ್ವಾಲ ಸರ್ ಅವರು ಹೇಳಿದರು.
ಅವರು ಗ್ರಾಮದಲ್ಲಿ ನಡೆದ ನರೇಗಾ ಕಾಮಗಾರಿ ವೀಕ್ಷಿಸಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನರೇಗಾ ಕೆಲಸ ನಡೆಯುತ್ತಿವೆ ನರೇಗಾ ಯೋಜನೆಯಡಿ, ಶಾಲಾ ಆವರಣ ಅಭಿವೃದ್ಧಿ ಕೃಷಿ ಹೊಂಡ ದನ ಮತ್ತು ಆಡುಗಳ ಶೇಡ್ ಕೆರೆ ಹೂಳು ಎತ್ತುವುದು ಕುಸ್ತಿ ಮೈದಾನ ನಿರ್ಮಾಣ ತೋಟದ ರಸ್ತೆ ನಿರ್ಮಾಣ ಹಳ್ಳದ ಬಂದಾರ ಹುಳುತ್ತುವುದು ವೈಯಕ್ತಿಕ ಶೌಚಾಲಯ ಮುಂತಾದ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ ಎಂದರು ಕೋಹಳ್ಳಿ ಪಿಡಿಓ ಶ್ರೀ ಎಮ್. ಎಸ್. ಚೌದರಿ ಮಾತನಾಡಿ ಎಲ್ಲ ಗ್ರಾಮಸ್ಥರ ಪ್ರೋತ್ಸಾಹ ಮತ್ತು ಎಲ್ಲಾ ಸದಸ್ಯರು.ಸಿಬ್ಬಂದಿಗಳ ಪರಿಶ್ರಮದಿಂದ ಉದ್ಯೋಗ ಖಾತರಿ ಯೋಜನೆ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ತುಖಾರಾಮ ದೇವಾಖಾತೆ ತಾಪಂ ಸದಸ್ಯ ಸದಾಶಿವ ಹರಪಾಳೆ ಸೋಮಶೇಖರ್ ಝರೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.