ಘಟಪ್ರಭಾ ಖಾಸಗಿ ಫೈನಾನ್ಸ್ ಕಂಪನಿಯಿಂದ ಪಂಗನಾಮ : ಸ್ಪಷ್ಟನೆ ನೀಡಿದ ನಿರ್ದೇಶಕ ಅಪ್ಪಣ್ಣ ಹುಣಗುಂದ

ಘಟಪ್ರಭಾ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಠೇವಣಿ (deposit) ಇಟ್ಟ ಹಣವನ್ನು ಮರಳಿ ಕೊಡದೇ ಖಾಸಗಿ ಪೈನಾನ್ಸ್ ಕಂಪನಿಯೊಂದು ಜನರನ್ನು ಯಾಮಾರಿಸುತ್ತಿದೆ ಎಂದು ಆರೋಪಿಸಿ ಗ್ರಾಹಕರು ಸೋಮವಾರ ಸ್ಥಳೀಯ ಪೈನಾನ್ಸ್ ಕಛೇರಿ ಮುಂದೆ ಸುಮಾರು ಎರಡು ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದರು.

ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿರುವ ಪಟ್ಟಣದ ನವೋದಯ ಪೈನಾನ್ಸ್ ಕಂಪನಿಯ ನಿರ್ದೇಶಕ ಮಂಡಳಿಯ ಓರ್ವ ಸದಸ್ಯರಾದ ಅಣ್ಣಪ್ಪ ಹುಣಗುಂದ ಗ್ರಾಹಕರಿಗೆ ವಂಚನೆಯಾಗಿರುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು.

ಈಗೀನ ನವೋದಯ ಪೈನಾನ್ಸ್ ಆಡಳಿತ ಮಂಡಳಿಯ ನಿರ್ದೇಶಕರಾದ ದುಂಡಪ್ಪ ಲಕ್ಷಟ್ಟಿ (ಎಂ.ಡಿ), ಗಂಗಾಧರ ಹುಣಗುಂದ, ಆನಂದ ವಾಡೇದ, ವರ್ಧಮಾನ ಬೆಣ್ಣಿ, ರೇವಪ್ಪ ಕಂಬಾರ, ಶ್ರೀಶೈಲ ಶಿಂದೋಳಿಮಠ, ಸಾಗರ ಶಿರಾಳಕರ, ಮಹಾದೇವಿ ಉದಗಟ್ಟಿ, ಶ್ರೀಮತಿ ಬಡ್ಡಿ ಎಲ್ಲರೂ ಸೇರಿ ಚರ್ಚಿಸಿ ಠೇವಣಿದಾರರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಬರುವ ನವೆಂಬರ್ 1ರ ಒಳಗಾಗಿ ಗ್ರಾಹಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಅವರೊಂದಿಗೆ ನಾನು ಹೋರಾಡುವುದಾಗಿ ತಿಳಿಸಿದ್ದರು.

ಹಾಗೂ ನನಗೂ ಈ ಸಂಸ್ಥೆಗೂ ಸಂಬಂಧ ಕಳಚಿ 6 ವರ್ಷ ಆಗಿದೆ, ನನ್ನ ಆರೋಗ್ಯದ ಕಾರಣದಿಂದ ಹಾಗೂ ವೈಯುಕ್ತಿಕ ಕಾರಣದಿಂದ ಸಂಸ್ಥೆಯಿಂದ ದೂರ ಉಳಿದಿದ್ದೇನೆ, ಒಂದು ವೇಳೆ ಗ್ರಾಹಕರ ಹಣ ಕೊಡದೆ ಇದ್ದರೇ ಇದರಲ್ಲಿ ಯಾರ ಕುತಂತ್ರ ಇದೆ ಎಂದು ನಾನು ಹೇಳುವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಎಲ್ಲಾ ನಿರ್ದೇಶಕರ ಹೆಸರು ಬರದೆ ನನ್ನ ಹೆಸರು ಮಾತ್ರ ಬಂದಿರುವುದು ತುಂಬಾ ನೋವು ತರಿಸಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

error: Content is protected !!