ಇತ್ತೀಚಿನ ದಿನಗಳಲ್ಲಿ ಗಂಡನ ಕಿರುಕುಳದಿಂದ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಒಂದಿಲ್ಲೊಂದು ಬೆಳಕಿಗೆ ಬರುತ್ತಲೇ ಇವೆ. ಗಂಡಂದಿರ ದುರಭ್ಯಾಸ ಚಟಗಳಿಗೆ ಮಹಿಳೆಯರು (Women) ಬಲಿಯಾಗುತ್ತಿರುವುದನ್ನು ಕಾಣುತ್ತಲೇ ಇದ್ದೇವೆ. ಆದರೆ ಬೆಂಗಳೂರಿನಲ್ಲಿ ನಡೆದಿರುವ ಘಟನೆ ಇದಕ್ಕೆ ತದ್ವಿರುದ್ಧವಾಗಿದೆ. ಹೆಂಡತಿಯ ಹಣದ ದಾಹ ನೀಗಿಸಲಾಗದೇ ಬೇಸತ್ತ ಗಂಡ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.
ಹೆಂಡತಿಯ ಕಾಟ ತಾಳಲಾರದೆ ಡೆತ್ನೋಟ್ ಬರೆದಿಟ್ಟು ಪ್ರಾಣ ಕಳೆದುಕೊಂಡಿದ್ದಾನೆ. ಬೆಂಗಳೂರಿನ (Bengaluru) ಶ್ರೀನಗರ ಬಳಿಯ ಅವಳಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ ಎಂದು ಗುರುತಿಸಲಾಗಿದೆ.
ಬಾರ್ ಒಂದರಲ್ಲಿ ಕ್ಯಾಶಿಯರ್ ಆಗಿರುವ ಅಣ್ಣಯ್ಯ ಅವರು ಹೆಂಡತಿ ಕಾಟದಿಂದ ಬೇಸತ್ತು ಪ್ರಾಣ ಕಳೆದುಕೊಳ್ಳುತ್ತಿರುವುದಾಗಿ ಡೆತ್ ನೋಟ್ನಲ್ಲಿ (DeathNote) ಬರೆದಿಟ್ಟಿದ್ದಾರೆ.
ಅಣ್ಣಯ್ಯ ಅವರಿಗೆ ಐದು ವರ್ಷದ ಹಿಂದೆ ಉಮಾ ಎಂಬಾಕೆಯ ಜತೆ ಮದುವೆಯಾಗಿತ್ತು. ಮದುವೆ (Marriage) ಬಳಿಕ ಹಣದ ವಿಚಾರಕ್ಕೆ ಸಂಬಂಧಿಸಿ ಗಂಡ ಹೆಂಡತಿ ಮಧ್ಯೆ ಯಾವಾಗಲೂ ಜಗಳ ಆಗುತ್ತಿತ್ತು. ಎಷ್ಟು ದುಡಿದರೂ ಹೆಂಡತಿ ದುಡ್ಡು-ದುಡ್ಡು ಎನ್ನುತ್ತಾಳೆ. ನಾನು ಎಷ್ಟು ದುಡಿದರೂ ಸಾಕಾಗುವುದಿಲ್ಲ. ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಅಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ನಲ್ಲಿ ಅಣ್ಣಯ್ಯ ಬರೆದಿಟ್ಟಿದ್ದಾರೆ.